ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಶನಿವಾರ ಮಧ್ಯಾಹ್ನ ಕೇಂದ್ರ ಸರ್ಕಾರದ ಹಿಂದೂಸ್ತಾನ್ ಶಿಪ್ಯಾರ್ಡ್ ಲಿಮಿಟೆಡ್ (ಎಚ್ಎಸ್ಎಲ್) ನಲ್ಲಿ ಬೃಹತ್ ಕ್ರೇನ್ ಅಪಘಾತಕ್ಕೀಡಾಗಿ ಕನಿಷ್ಠ 10 ಕಾರ್ಮಿಕರು ಬಲಿಯಾಗಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಮಿಕರು ಹಡಗು ನಿರ್ಮಾಣಕ್ಕೆ ಉಪಕರಣಗಳನ್ನು ಸಾಗಿಸಲು ಬಳಸಿದ ಕ್ರೇನ್ನ ತಪಾಸಣೆ ನಡೆಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಬೃಹತ್ ಕ್ರೇನ್ ಇದ್ದಕ್ಕಿದ್ದಂತೆ ಮುರಿದು ನೆಲಕ್ಕೆ ಅಪ್ಪಳಿಸಿದೆ.
ಕ್ರೇನ್ ಅಪಘಾತಕ್ಕೀಡಾದಾಗ ಸುಮಾರು 20 ಕಾರ್ಮಿಕರು ತಪಾಸಣೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಕೆಲವು ಕಾರ್ಮಿಕರು ಸುರಕ್ಷತೆಗಾಗಿ ಓಡುವಲ್ಲಿ ಯಶಸ್ವಿಯಾದರು, ಇನ್ನೂ ಕೆಲವರು ಗಾಯಗೊಂಡರು ಮತ್ತು ಕನಿಷ್ಠ 10 ಕಾರ್ಮಿಕರನ್ನು ಕ್ರೇನ್ನ ತೂಕದ ಕೆಳಗೆ ಸಿಲುಕಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಯಗೊಂಡ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶಾಖಪಟ್ಟಣಂನ ಪೊಲೀಸ್ ಕಮಿಷನರ್ ಆರ್.ಕೆ. ಮೀನಾ ಅಪಘಾತದ ಮಾಹಿತಿ ಪಡೆಯಲು ಸ್ಥಳಕ್ಕೆ ಧಾವಿಸಿದ್ದಾರೆ.
ವಿಶಾಖಪಟ್ಟಣಂ ಮೂಲದ ರಾಜ್ಯ ಪ್ರವಾಸೋದ್ಯಮ ಸಚಿವ ಮುತಮ್ಸೆಟ್ಟಿ ಶ್ರೀನಿವಾಸ್ ರಾವ್ ಅಪಘಾತದ ಬಗ್ಗೆ ವಿಚಾರಿಸಿದ್ದು, ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
#WATCH A crane collapses at Hindustan Shipyard Limited in Visakhapatnam, Andhra Pradesh. 10 dead and 1 injured in the incident, says DCP Suresh Babu. pic.twitter.com/BOuz1PdJu3
— ANI (@ANI) August 1, 2020