Sunday, June 26, 2022

Latest Posts

ವಿಶೇಷ ರೈಲಿನಲ್ಲಿ ರಾಜ್ಯಕ್ಕೆ ಬಂದ 1000 ಪ್ರಯಾಣಿಕರು: 14ದಿನ ಕ್ವಾರಂಟೈನ್

ಬೆಂಗಳೂರು: ದೇಶದಲ್ಲಿ ಕೊರೋನಾ ಲಾಕ್ ಡೌನ್ ನಿಂದ ಜನರಿಗೆ ಒದಗಿಸಲಾಗಿದ್ದ ವಿಶೇಷ ರೈಲಿನಿಂದ 1000 ಮಂದಿ ಪ್ರಯಾಣಿಕರು ಬೆಂಗಳೂರಿಗೆ ಬಂದಿದ್ದಾರೆ.

ಲಾಖ್ ಡೌನ್ ಸಡಿಲಿಕೆಯಿಂದಾಗಿ ಸರ್ಕಾರ ದೇಶದಾದ್ಯಂತ 30 ವಿಶೇಷ ರೈಲು ಸೇವೆಗಳನ್ನು ನೀಡಲಾಗಿತ್ತು. ಅದರಲ್ಲಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಮೊದಲ ಟ್ರೈನ್ ಇದಾಗಿದ್ದು, ಇದರಲ್ಲಿ 1000 ಮಂದಿ ಪ್ರಯಾಣಿಕರು ಬಂದಿದ್ದಾರೆ.

ಎಲ್ಲಾ 1000 ಪ್ರಯಾಣಿಕರನ್ನು 14ದಿನಗಳ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತದೆ. ಪ್ರಯಾಣಿಕರನ್ನು ಬಿ.ಎಂ.ಟಿ.ಸಿ ಬಸ್ ಗಳ ಮೂಲಕ ಹೋಟೆಲ್ ಅಥವಾ ನಿಗದಿತ ಕ್ವಾರಂಟೈನ್ ಪ್ರದೇಶಗಳಿಗೆ ತಲುಪಿಸಲಾಗುತ್ತಿದೆ. ಕ್ವಾರಂಟೈನ್ ನಲ್ಲಿನ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು. ಈಗಾಗಲೆ 4700 ಮಂದಿಗೆ ಕ್ವಾರಂಟೈನ್ ನಲ್ಲಿ ಇರಿಸಲು ಸಿದ್ಧತೆ ಮಾಡಲಾಗಿದೆ. ಎಂದು ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss