ಯಾದಗಿರಿ : ಯಾದಗಿರಿಯ ಶ್ರೀಮದ್ ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಯತಿವರ್ಯ ಗುರುನಾಥೇಂದ್ರ ಸರಸ್ವತಿ ಶ್ರೀಗಳ ನಿಧನಕ್ಕೆ ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ನಾಡಿನಾದ್ಯಂತ ಸಂಚರಿಸಿ ಸನಾತನ ಸಂಸ್ಕøತಿಯ ಪ್ರಚಾರ ಮಾಡುತ್ತಿದ್ದ ಶ್ರೀಗಳು, ಧಾರ್ಮಿಕ ಕಾರ್ಯಗಳೊಟ್ಟಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ವಿಶಿಷ್ಟ ಸಾಧನೆ ಮಾಡಿದ್ದರು. `ವಿಶ್ವಕರ್ಮ ಮತ್ತು ವಿಶ್ವಬ್ರಾಹ್ಮಣರು’, `ವಿಶ್ವಕರ್ಮ ಧರ್ಮ’, `ವಿಶ್ವ ಬ್ರಾಹ್ಮಣರಲ್ಲಿ ಶಿಲ್ಪಸಿದ್ಧಾಂತ, ವಿಶ್ವಬ್ರಾಹ್ಮಣರ ಷಟ್ಕರ್ಮಗಳು ಸೇರಿದಂತೆ ಹಲವಾರು ಗ್ರಂಥಗಳನ್ನು ರಚಿಸಿದ್ದರು. ಅವರ ಅಗಲಿಕೆಯಿಂದ ಭಕ್ತ ಸಮೂಹವಲ್ಲದೇ ಸಾರಸ್ವತ ಲೋಕಕ್ಕೂ ತುಂಬಲಾರದ ನಷ್ಟವಾಗಿದೆ. ದೇವರು, ಭಕ್ತ ಸಮೂಹಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಸಚಿವರಾದ ಚವ್ಹಾಣ್ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.