ವಿಶ್ವದರ್ಜೆಯ ಫಿಲ್ಮ್‌ಸಿಟಿ: ನಿರ್ಮಾಣ ಆಗಲಿ

0
180

ಮೈಸೂರು: ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಅವಸರದಿಂದ ನಿರ್ಮಾಣ ಆಗುವಂತಹದ್ದಲ್ಲ. ಇತಂಹ ಅವಕಾಶ ಮಿಸ್ ಮಾಡಿಕೊಳ್ಳಬಾರದು. ವಿಶ್ವಮಟ್ಟದಲ್ಲಿ ತಿರುಗಿ ನೋಡುವ ಹಾಗೆ ಫಿಲ್ಮ್ ಸಿಟಿ ನಿರ್ಮಾಣವಾಗಬೇಕು ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.

ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣದ ವಿಚಾರದಲ್ಲಿ ಯಾರು ಕೂಡ ಲೀಡರ್‌ಗಳಲ್ಲ. ನಮ್ಮ ಇಂಡಸ್ಟ್ರಿಯ ಪ್ರತಿಯೊಬ್ಬರು ಅದರಲ್ಲಿ ಪಾತ್ರಧಾರಿಗಳಷ್ಟೇ ಎಂದರು. ಫಿಲಂ ಸಿಟಿ ನಿರ್ಮಾಣವು ಒಂದು ದೊಡ್ಡ ಸುದ್ದಿ. ಎಲ್ಲರಿಗೂ ಫಿಲ್ಮ್ ಸಿಟಿ ಬೇಕಾಗಿದೆ. ಇದೇ ಫಿಲ್ಮ್ ಸಿಟಿ ನಿರ್ಮಾಣದಲ್ಲಿ ಯಾರು ಲೀಡರ್ ಅಲ್ಲ. ಎಲ್ಲರೂ ಭಾಗಿದಾರರೇ ಎಂದು ಹೇಳಿದರು.

LEAVE A REPLY

Please enter your comment!
Please enter your name here