ಹೊಸದಿಲ್ಲಿ: ವಿಶ್ವದಾದ್ಯಂತ ಕೊರೋನಾ ವೈರಾಣು ಪಿಡುಗು ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಜಗತ್ತನಾದ್ಯಂತ 22.5 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕಿತರಾಗಿದ್ದಾರೆ.
ವಿಶ್ವದಲ್ಲಿ ಕೊರೋನಾ ಸೋಂಕಿಗೆ ಜಗತ್ತಿನ ಬಲಿಷ್ಠ ರಾಷ್ಟ್ರಗಳು ತುತ್ತಾಗಿದ್ದು, ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕ ಒಂದರಲ್ಲೇ 6.5ಲಕ್ಷಕ್ಕೂ ಅಧಿಕ ಸೋಂಕಿತರಿದ್ದಾರೆ. ದೇಶದಲ್ಲಿ ಈವರೆಗೂ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 37 ಸಾವಿರ ದಾಟಿದೆ.
ವಿಶ್ವದಲ್ಲಿ ಕೊರೋನಾ ಸೋಂಕಿಗೆ ಬರೋಬ್ಬರಿ 22.5 ಲಕ್ಷ ಮಂದಿ ಸೋಂಕಿತರು ಬಳಲುತ್ತಿದ್ದು, 1.5ಲಕ್ಷ ಮಂದಿ ಕೊರೋನಾ ಸೋಂಕಿನಿಂದ ಬಲಿಯಾಗಿದ್ದಾರೆ. ವಿಶ್ವದಲ್ಲಿ ಇಟಲಿ, ಸ್ಪೇನ್, ಜರ್ಮನಿ ಸೇರಿದಂತೆ ಅನೇಕ ರಾಷ್ಟ್ರಗಳು ಕೊರೋನಾ ವೈರಾಣುವಿಗೆ ಶರಣಾಗಿ ತತ್ತರಿಸಿ ಹೋಗಿವೆ.
ಈವರೆಗೂ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 14 ಸಾವಿರ ಗಡಿದಾಟಿದ್ದು, 400ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.