ಹೊಸದಿಲ್ಲಿ: ವಿಶ್ವದಲ್ಲಿ ಮಹಾಮಾರಿ ಕೊರೋನಾ ಸೋಂಕಿಗೆ 3ಮಿಲಿಯನ್ ಮಂದಿ ತುತ್ತಾಗಿದ್ದಾರೆ. ಅಮೆರಿಕ ಒಂದರಲ್ಲಿಯೇ ಒಂದೇ ದಿನ 1303 ಮಂದಿ ಬಲಿಯಾಗಿದ್ದಾರೆ.
ಅಮೆರಿಕದ ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ನೀಡಿರುವ ವರದಿ ಪ್ರಕಾರ ಅಮೆರಿಕದಲ್ಲಿ ಈವರೆಗೂ 56 ಸಾವಿರಕ್ಕೂ ಹೆಚ್ಚು ಮಂದಿ ಕೊರೋನಾಗೆ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 1 ಮಿಲಿಯನ್ ದಾಟಿದೆ.
ವಿಶ್ವದಲ್ಲಿ ಸ್ಪೇನ್ ನಲ್ಲಿ 23 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದು, 2,29,000ಕ್ಕೂ ಹೆಚ್ಚು ಸೋಂಕಿತರು ದಾಖಲಾಗಿದ್ದಾರೆ. ಇಟಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2ಲಕ್ಷ ಗಡಿ ದಾಟಲಿದೆ. ವಿಶ್ವದಲ್ಲಿ ಮರಣ ಮೃದಂಗ ಮುಂದುವರೆಸುತ್ತಿರುವ ಕೊರೋನಾ ಪಿಡುಗಿನಿಂದ 2,10,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.