ವಿಶ್ವದಲ್ಲಿ 24 ಗಂಟೆಗೆ ಬರೋಬ್ಬರಿ 1,89,000 ಮಂದಿ ಸೋಂಕಿತರು: ಮಲೇರಿಯಾಗಿಂತ ಹೆಚ್ಚು ಸಾವಿನ ಸಂಖ್ಯೆ ಕಂಡ ಕೊರೋನಾ!

0
62

ಜೆನೆವಾ: ವಿಶ್ವದಲ್ಲಿ ಕೊರೋನಾ ವೈರಸ್ ರಣಕೇಕೆ ಭಾರಿಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ ವಿಶ್ವದಲ್ಲಿ ಬರೋಬ್ಬರಿ 1,89,000 ಕೊರೋನಾ ಸೋಂಕಿತರು ವರದಿಯಾಗಿರುವ ಹೊಸ ದಾಖಲೆಯನ್ನು ವಿಶ್ವ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಬ್ರೆಜಿಲ್ ನಲ್ಲಿ 30,476 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ 13,44,143 ಪ್ರಕರಣಗಳು ದಾಖಲಾಗಿದೆ. ಅಮೆರಿಕದಲ್ಲಿ 44 ಸಾವಿರ ಕೊರೋನಾ ಸೋಂಕಿತರು ವರದಿಯಾಗಿದ್ದಾರೆ. ಭಾರತದಲ್ಲಿ 19,459 ಕೊರೋನಾ ಪ್ರಕರಣಗಳು ವರದಿಯಾಗಿದೆ.

ಪ್ರತಿ 24 ಗಂಟೆಗಳಿಗೆ 4,700 ಮಂದಿ ಬಲಿಯಾಗುತ್ತಿದ್ದು, 1 ಗಂಟೆಯಲ್ಲಿ ಸರಿ ಸುಮಾರು 196 ಮಂದಿ ಮೃತರಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ 2018 ರ ಅಂಕಿಅಂಶಗಳ ಪ್ರಕಾರ, ಸಾವಿನ ಪ್ರಮಾಣವು ತಿಂಗಳಿಗೆ 78,000 ರಷ್ಟಿದೆ, 64,000 ಏಡ್ಸ್ ಸಂಬಂಧಿತ ಸಾವುಗಳು ಮತ್ತು 36,000 ಮಲೇರಿಯಾದಿಂದ ಬಲಿಯಾಗುತ್ತಿದ್ದರು.

ಜನವರಿ 9 ರಂದಯ ಚೀನಾದ ವುಹಾನ್ ನಗರದಲ್ಲಿ ಮೊದಲ ವ್ಯಕ್ತಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಬಳಿಕ ಕೇವಲ 5 ತಿಂಗಳಲ್ಲಿ ಕೊರೋನಾ ಸೋಂಕು ಮಲೇರಿಯಾ ರೋಗದಿಂದ ಮೃತಪಟ್ಟವರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಡೆಡ್ಲಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಇದರಿಂದ ವಿಶ್ವದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 10.1 ಮಿಲಿಯನ್ ಆಗಿದ್ದು, ಅವರಲ್ಲಿ 5.14 ಮಿಲಿಯನ್ ನಷ್ಟು ಮಂದಿ ಗುಣಮುಖರಾಗಿದ್ದಾರೆ. ವಿಶ್ವದಲ್ಲಿ ಒಟ್ಟಾರೆ 5.02 ಲಕ್ಷ ಮಂದಿ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

LEAVE A REPLY

Please enter your comment!
Please enter your name here