ವಿಶ್ವದಾದ್ಯಂತ ಕೊರೋನಾ ಅಟ್ಟಹಾಸ: 1 ಕೋಟಿ ದಾಟಿದ ಸೋಂಕಿತರ ಸಂಖ್ಯೆ, 5 ಲಕ್ಷಕ್ಕೂ ಅಧಿಕ ಮಂದಿ ಬಲಿ!

0
62

ನವದೆಹಲಿ: ಜಗತ್ತಿನಾದ್ಯಂತ ಕೊರೋನಾ ವೈರಸ್ ಆರ್ಭಟ ಮುಂದುವರೆದಿದೆ. ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ ೧ ಕೋಟಿ ದಾಟಿದ್ದು ಬರೋಬ್ಬರಿ ೫ ಲಕ್ಷ ಮಂದಿ ಬಲಿಯಾಗಿದ್ದಾರೆ.
ಶೇ.೫೦ರಷ್ಟು ಪ್ರಕರಣ ಯುರೋಪ್ ಮತ್ತು ಅಮೆರಿಕದಲ್ಲಿಯೇ ವರದಿಯಾಗಿವೆ. ಅಮೆರಿಕದಲ್ಲಿ ೨೫ ಲಕ್ಷಕ್ಕೂ ಹೆಚ್ಚು ಮಂದಿ ಕೊರೋನಾಗೆ ತುತ್ತಾಗಿದ್ದಾರೆ. ಈ ಪೈಕಿ ೧,೨೮ ಲಕ್ಷ ಮಂದಿ ಬಲಿಯಾಗಿದ್ದಾರೆ. ನಂತರ ಬ್ರೆಜಿಲ್ ನಲ್ಲಿ ೧೩ ಲಕ್ಷ ಸೋಂಕಿತರಿದ್ದು ೫೭ ಸಾವಿರ ಮಂದಿ ಸಾವನ್ನಪ್ಪಿದ್ದಾರೆ.
ವರ್ಲ್ಡೋ ಮೀಟರ್ ಪ್ರಕಾರ, ಇದುವರೆಗೂ ೧,೦೧,೧೦,೧೧೭ ಸೋಂಕಿತರು ಜಗತ್ತಿನಾದ್ಯಂತ ಕಂಡುಬಂದಿದ್ದು, ಕೊರೋನಾ ಸಾವಿನ ಸಂಖ್ಯೆ ೫,೦೧,೮೭೮ಕ್ಕೆ ಏರಿದೆ. ೫೪,೮೨,೦೫೦ ಜನ ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ.

LEAVE A REPLY

Please enter your comment!
Please enter your name here