ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಶ್ವದ ಅತಿದೊಡ್ಡ ಕೋವಿಡ್ 19 ಚಿಕಿತ್ಸಾ ಕೇಂದ್ರ ಸರ್ದಾರ್ ವಲ್ಲಭಬಾಯಿ ಪಟೇಲ್ ಆಸ್ಪತ್ರೆ ಉದ್ಘಾಟನೆ

ನವದೆಹಲಿ: ವಿಶ್ವದ ಅತಿದೊಡ್ಡ ಕೊವಿಡ್ 19 ಚಿಕಿತ್ಸಾ ಕೇಂದ್ರ ಎನಿಸಿಕೊಂಡಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಕೊವಿಡ್ ಕೇರ್ ಆಸ್ಪತ್ರೆ(SPCCCH)ಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಭಾನುವಾರದಂದು ಲೋಕಾರ್ಪಣೆ ಮಾಡಿದರು.

10 ಸಾವಿರ ಬೆಡ್ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯು ದೆಹಲಿಯ ಕಂಟೋನ್ಮೆಂಟ್ ಪ್ರದೇಶ ಹರ್ಯಾಣ ಗಡಿಭಾಗದ ಚಟ್ಟರ್ ಪುರ್ ಸಮೀಪವಿದೆ. ಕೇಂದ್ರ ಗೃಹ ಸಚಿವಾಲಯ, ಡಿಆರ್ ಡಿಒ ಸಹಕಾರದೊಂದಿಗೆ ಈ ಬೃಹತ್ ಆಸ್ಪತ್ರೆ ನಿರ್ಮಾಣಗೊಂಡಿದೆ.

ದೀನ್ ದಯಾಳ್ ಆಸ್ಪತ್ರೆ, ಮದನ್ ಮೋಹನ್ ಮಾಳವೀಯ ಆಸ್ಪತ್ರೆ ಜೊತೆಗೆ SPCCCH ಸಂಪರ್ಕ ಹೊಂದಲಾಗಿದೆ. ಇದಲ್ಲದೆ ಲೋಕ್ ನಾಯಕ್ ಜೈ ಪ್ರಕಾಶ್ ನಾರಾಯನ್ ಆಸ್ಪತ್ರೆ ಹಾಗೂ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಡಾ SPCCHಗೆ ರೋಗಿಗಳನ್ನು ಕಳಿಸಬಹುದಾಗಿದೆ.

ಸದ್ಯಕ್ಕೆ ಐಟಿಬಿಪಿ ನಿರ್ವಹಣೆ ಹೊಣೆ ಹೊತ್ತುಕೊಂಡಿದ್ದು, 2000 ಬೆಡ್ಮ್ 170 ತಜ್ಞ ವೈದ್ಯರು, 700 ನರ್ಸ್, ತುರ್ತು ಸೇವಾ ಸಿಬ್ಬಂದಿಗಳನ್ನು ಬಳಸಲಾಗುತ್ತಿದೆ. ಈ ಆಸ್ಪತ್ರೆ 1700 ಅಡಿ ಉದ್ದ, 700 ಅಡಿ ಅಗಲ ವಿಸ್ತೀರ್ಣವಿದೆ. 200 ಕೊಠಡಿಗಳಲ್ಲಿ 50 ಹಾಸಿಗೆ, 75ಕ್ಕೂ ಅಧಿಕ ಆಂಬ್ಯುಲೆನ್ಸ್ ಗಳಿವೆ.ದೆಹಲಿಯಲ್ಲಿ ಕೊವಿಡ್ 19 ಕೇಸ್ ಸಂಖ್ಯೆ 94 695ಗೇರಿದೆ. 26 148 ಸಕ್ರಿಯ ಪ್ರಕರಣಗಳಿವೆ. 65 624 ಗುಣಮುಖರಾಗಿದ್ದರೆ, 2923 ಮಂದಿ ಮೃತಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss