ಕಿಂಗ್ಸ್ಟನ್: ವಿಶ್ವದ ಅತ್ಯಂತ ವೇಗದ ಓಟಗಾರ ಎಂಬ ಖ್ಯಾತಿಯ ಜಮೈಕಾದ ಸ್ರ್ವಿoಟ್ ದಿಗ್ಗಜ ಉಸೇನ್ ಬೋಲ್ಟ್ಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.
ಆಗಸ್ಟ್ 21ರಂದು ತಮ್ಮ 34ನೇ ಜನ್ಮದಿನದ ಪಾರ್ಟಿ ಮಾಡಿದ ಬೆನ್ನಲ್ಲೇ ಅವರಿಗೆ ಸೋಂಕು ದೃಢಪಟ್ಟಿದೆ.
ಬೋಲ್ಟ್ ಜಮೈಕಾದ ಮನೆಯಲ್ಲಿ ಸ್ವಯಂ ಐಸೋಲೇಷನ್ಗೆ ಒಳಗಾಗಿದ್ದಾರೆ. ಬೋಲ್ಟ್ ಅವರ ಬರ್ತ್ಡೇ ಪಾರ್ಟಿಯಲ್ಲಿ ಕ್ರಿಕೆಟಿಗ ಕ್ರಿಸ್ ಗೇಲ್, ಇಂಗ್ಲಿಷ್ ಫುಟ್ಬಾಲ್ ತಾರೆ ರಹೀಮ್ ಸ್ಟರ್ಲಿಂಗ್ ಸಹಿತ ಹಲವು ಗಣ್ಯರು ಭಾಗವಹಿಸಿದ್ದರು ಎನ್ನಲಾಗಿದೆ.
8 ಒಲಿಂಪಿಕ್ಸ್ ಸ್ವರ್ಣ ಪದಕಗಳ ವಿಜೇತರಾಗಿರುವ ಬೋಲ್ಟ್, 100 ಮೀಟರ್ ಓಟದಲ್ಲಿ 9.58 ಸೆಕೆಂಡ್ಗಳಲ್ಲಿ ಓಡಿದ ವಿಶ್ವದಾಖಲೆ ಹೊಂದಿದ್ದಾರೆ. 2017ರಲ್ಲಿ ಅವರು ನಿವೃತ್ತಿ ಹೊಂದಿದ್ದರು.