ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಶ್ವದ ದುಬಾರಿ ಶಹರದಲ್ಲಿ ಭಯಹುಟ್ಟಿಸುತ್ತಿದೆ ‘ಕಾಫೀನ್ ಹೌಸ್’ ಎಂಬ ಕರಾಳ ಜಗತ್ತು

  • ಹಿತೈಷಿ

ದಿನಪೂರ್ತಿ ದುಡಿದು ದಣಿವಾಗಿರುವಾಗ ಮನೆಯಲ್ಲಿ ಹಾಯಾಗಿ ಟಿವಿ ನೋಡ್ಕೊಂಡು ಕಾಲು ಚಾಚಿ ಮಲಗುವುದರಲ್ಲಿ ಸಿಗುವ ಸಂತೋಷಕ್ಕೆ ಪಾರವೇ ಇಲ್ಲ ಅಲ್ವಾ? ಆದರೆ ಇಷ್ಟೆಲ್ಲಾ ಆಯಾಸದ ಬದುಕಿನ ನಡುವೆ ನೀವು ಹಾಯಾಗಿ ಮಲಗಲು ಬಯಸುವ ಮನೆ ಒಂದು ಸಣ್ಣ ಕೋಣೆಗಿಂತಲೂ ಚಿಕ್ಕದಾಗಿದ್ದು, ಅಲ್ಲೇ ನಿಮ್ಮ ಇಡೀ ಬದುಕು ಸಾಗಿಸಬೇಕು ಅಂದರೆ!!

ಇಷ್ಟೆಲ್ಲಾ ವಿಚಾರ ನಾನು ಹೇಳ್ತಿರೋದಾದ್ರು ಯಾಕೆ? ಈ ಸಣ್ಣ ಕೋಣೆಯಂತ ಮನೆಯಲ್ಲಿ ಯಾರಿರ್ತಾರೆ ಅಂತ ಯೋಚನೆ ಮಾಡ್ತಿದ್ದೀರಾ? ಈ ಕಥೆಯಲ್ಲಿ ನಿಮಗೆ ಸಂಪೂರ್ಣ ವಿವರ ಹೇಳ್ತೀನಿ ನೋಡಿ…

Hong Kong's Coffin Homes

ಈ ಮನೆಗಳು 180 ಚದರಕ್ಕಿಂತ ದೊಡ್ಡದಿಲ್ಲ. ಈ ಮನೆಗಳು ಭಾರತದಲ್ಲಿ ಸ್ಲಂಗಳಂತೆ ಭಾಸವಾಗುತ್ತೆ. ಏಕೆಂದರೆ ಇಲ್ಲಿರೋರೆಲ್ಲ ಬಡವರು, ಪಿಂಚಣಿ ಸಿಗದೆ ಪರದಾಡುತ್ತಿರುವವರು, ಮಾನಸೀಕ ಅಸ್ವಸ್ಥರು, ಬಡತನ ಮಟ್ಟಕ್ಕಿಂತ ಕಡಿಮೆ ಆದಾಯ ಕಳಿಸುವ ಗರಿಷ್ಠ ನಾಲ್ಕು ಜನರ ಕುಟುಂಬ ಈ ಸಣ್ಣ ರೂಮ್ ನಲ್ಲಿ ವಾಸಿಸುತ್ತಿದ್ದಾರೆ ಅಂದರೆ ನಂಬ್ತೀರಾ! ನಂಬಲು ಕಷ್ಟವಾದ್ರೂ ಇದು ನಿಜ..

Inside Hong Kong's 50 Sq. Ft. 'Coffin Cubicle' Homes | Fortune

ಇಷ್ಟಕ್ಕೂ ಈ ಮನೆಗಳು ಇರೋದು ಚೀನಾದ ಹಾಂಗ್ ಕಾಂಗ್ ನಲ್ಲಿ! ಹಾಂಕ್ ಕಾಂಗ್ ನಲ್ಲಿ ಆರ್ಥಿಕತೆ ಎತ್ತರಕ್ಕೆ ಏರುತ್ತಿದ್ದು, ಎಲ್ಲಾ ವ್ಯವಹಾರಗಳು ದುಬಾರಿಯಾಗಿ ಬಡ ಜನರಿಗೆ ಯಾವುದೇ ಮೂಲ ಸೌಕರ್ಯಗಳನ್ನು ಬಳಸೋಕು ಆಗದೆ ಕಂಗಾಲಾಗಿದ್ದರು. ಈ ವೇಳೆ ಚಾಲ್ತಿಗೆ ಬಂದಿದ್ದೆ ಈ ‘ಕಾಫೀನ್ ಮನೆಗಳು’ ಅಂದರೆ ಶವ ಪೆಟ್ಟಿಗೆಗಳಂತಹ ಮನೆ ಎಂದರ್ಥ.

The 'Coffin Homes' of Hong Kong - The Atlantic

ಶವ ಪೆಟ್ಟಿಗೆಗಳಂತಹ ಮನೆಗಳಲ್ಲಿ ವಾಸವಿರುವವರ ಪಾಡು ನಿಜಕ್ಕೂ ಶೋಚನೀಯ. ಈ ಮನೆಗಳೋ ನೋಡಲು ಅಪಾರ್ಟಮೆಂಟ್ ನಂತೆ ಕಾಣುತ್ತದೆ. ಆದರೆ ಒಳ ಹೊಕ್ಕರೆ ಸಿಗೋದು ಕಸದ ರಾಶಿ, ಶುಚಿತ್ವ ಇಲ್ಲದ ಮನೆಗಳ ಸಾಲು. ಹಾಸಿಗೆ, ಅಡುಗೆ ಕೋಣೆ ಎಲ್ಲಾ ಸೇರಿ ಜನರೂ ಅವುಗಳ ಮಧ್ಯೆಯೇ ಹಿಂಡಿ ಹಿಪ್ಪೆಯಾಗಿರುತ್ತಾರೆ.. ಅಷ್ಟೇ ಅಲ್ಲಾ.. ಇಲ್ಲಿ ಎಲ್ಲಾ ಮನೆಗಳಿಗೂ ಸೇರಿ ಇಂತಿಷ್ಟು ಬಾತ್ ರೂಂ ಗಳು ಇರುತ್ತವೆ ಅಷ್ಟೆ.. ಕೆಲವರಿಗಂತೂ ಅಡುಗೆ ಮನೆಯಲ್ಲೇ ಶೌಚಾಲಯ, ಅಲ್ಲೇ ಬೆಡ್ ರೂಂ.ಗಳು..

Ay The Shame of Humanity ”: Coffin Houses with More Than 200,000 People in Hong Kong | Kowloon walled city, Hong kong, Hong

ಹಾಂಗ್ ಕಾಂಗ್ ನ ವಿಶ್ವವಿದ್ಯಾಲಯದ ಸಂಶೋಧನೆಯ ಮಾಹಿತಿ ಪ್ರಕಾರ, ಈ ಮನೆಗಳಿಗೆ ಬರೋಬ್ಬರಿ 15 ಮಂದಿ ಮಾಲೀಕರಿರುತ್ತಾರಂತೆ. ಅವರಲ್ಲಿ ಎಷ್ಟೋ ಜನ ನ್ಯಾಯಯುತವಾಗಿ ಮಾಲೀಕತ್ವ ಪಡೆದವರೂ ಇರೋದಿಲ್ಲ. ಜೊತೆಗೆ ಈ ಕಟ್ಟಡಗಳು ವಿನ್ಯಾಸಗೊಂಡ ವೇಳೆ ನಿರ್ಧರಿಸಿದ್ದ ಜನರಿಗಿಂತ ಬರೋಬ್ಬರಿ 6 ಪಟ್ಟು ಹೆಚ್ಚು ಜನ ಈ ಮನೆಗಳಲ್ಲಿ ವಾಸವಾಗಿದ್ದಾರೆ.

Coffin homes: the grim reality of Hong Kong's housing system | by Hortense Martin | Medium

ವಿಶ್ವಸಂಸ್ಥೆ ಬೇಸರ: ವಿಶ್ವದ ದುಬಾರಿ ರಾಷ್ಟ್ರವೆನಿಸಿಕೊಂಡಿರುವ ಹಾಂಗ್ ಕಾಂಗ್ ನಲ್ಲಿ ಈ ಪರಿಸ್ಥಿತಿಗೆ ‘ಮಾನವ ಘನತೆಗೆ ಮಾಡಿದ ಅವಮಾನ’ ಎಂದು ಉಲ್ಲೇಖಿಸಿದೆ.
ಖಾಲಿಯಿರುವ ಭೂಪ್ರದೇಶಗಳಲ್ಲಿ ವಸತಿ ವ್ಯವಸ್ಥೆಯನ್ನು ವಿಸ್ತರಿಸುವ ಯೋಜನೆ, ಜನರಲ್ಲಿ ಜಾಗೃತಿ ಮೂಡಿಸುವ ಸರ್ಕಾರದ ಎಲ್ಲಾ ಪ್ರಯತ್ನಗಳು ವಿಫಲವಾದಾಗ ದೇಶದಲ್ಲಿ ಬಡವರ ಸಂಖ್ಯೆ ತಲುಪಿರೋದು ಮಾತ್ರ ಶೇ.15.8ಕ್ಕೆ.

See Benny Lam's "Trapped" Photos From Hong Kong

ಮೂರು ಕೋಣೆ, ವಿಶಾಲವಾದ ಹಾಲ್, ಸಾಯಂಕಾಲ ಕಾಫಿ ಹೀರಲು ಕುಳಿತುಕೊಳ್ಳುವ ಬಾಲ್ಕನಿ, 50 ಜನ ಬಂದರೂ ಕುಳಿತು ಊಟ ಮಾಡಬಹುದಾದ ಅಡುಗೆ ಕೋಣೆ ಇದ್ದರೂ ಕೆಲವೊಮ್ಮೆ ನಮ್ಮ ಮನೆ ಚಿಕ್ಕದೆನಿಸುತ್ತದೆ. ಒಮ್ಮೆ ಕಾಫೀನ್ ಮನೆಗಳಲ್ಲಿ ವಾಸ ಮಾಡುವವರ ಬಗ್ಗೆ ಯೋಚಿಸಿ..! ಎಂತಹ ಕಠೋರ ಮನಸ್ಥಿತಿಯೊಂದಿಗೆ ಬದುಕುತ್ತಿರಬಹುದು. ಅನಿವಾರ್ಯತೆ ಮನುಷ್ಯನನ್ನು ಎಂತಹ ವಿಕೋಪಕ್ಕೆ ದೂಡತ್ತದೆ ಅಲ್ವಾ? ಏನೇ ಹೇಳಿ ಕಾಫಿನ್ ಮನೆಗಳಲ್ಲಿ ವಾಸಿಸುತ್ತಿರುವವರು ‘ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು’ ಎಂಬ ಹಿರಿಯರ ಗಾದೆಗೆ  ತಲೆ ಬಾಗಿ ಬದುಕುತ್ತಿರುವುದಂತೂ ನಿಜ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss