ವಿಶ್ವದ ನಂ.1ಟೆನ್ನಿಸ್ ತಾರೆ ನೊವಾಕ್‌ಗೂ ಕೊರೋನಾ!

0
65

ಬೆಲ್ಗ್ರೇಡ್:ವಿಶ್ವದ ನಂ.೧ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್‌ಗೆ ಕೊರೋನಾ ವೈರಾಣು ಸೋಂಕು ತಗಲಿದೆ ಎಂದು ವರದಿ ತಿಳಿಸಿದೆ. ಇದರೊಂದಿಗೆ ಕೋವಿಡ್-೧೯ಸೋಂಕಿಗೆ ತುತ್ತಾದ ,ಟೆನಿಸ್ ರಂಗದ ನಾಲ್ಕನೇ ಆಟಗಾರ ಇವರಾಗಿದ್ದಾರೆ.ಇವರ ಪತ್ನಿಗೂ ಪಾಸಿಟಿವ್ ಬಂದಿದ್ದು, ಮಕ್ಕಳಿಗೆ ಮಾತ್ರ ನೆಗೆಟಿವ್ ಬಂದಿದೆ ಎಂದು ಸ್ವತಃ ಜೊಕೊವಿಚ್ ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದರೂ, ಸೆರ್ಬಿಯಾ ಮೂಲದ ಈ ಅಗ್ರಶ್ರೇಯಾಂಕದ ಆಟಗಾರನಲ್ಲಿ ಯಾವುದೇ ರೋಗಲಕ್ಷಣಗಳು ಗೋಚರಿಸಿಲ್ಲ .ಜೊಕೊವಿಚ್ ಕುಟುಂಬ ಬೆಲ್ಗ್ರೇಡ್‌ಗೆ ಬಂದಿಳಿದಾಗ ಕೊರೋನಾ ಪರೀಕ್ಷೆಗೆ ಅವರನ್ನು ಒಳಪಡಿಸಲಾಗಿತ್ತು. ಅವರು ಇತ್ತೀಚೆಗೆ ಸೆರ್ಬಿಯಾ ಮತ್ತು ಕ್ರೊವೇಶ್ಯಾ ಆತಿಥ್ಯದಲ್ಲಿ ನಡೆದಿದ್ದ ಟೆನಿಸ್ ಎಕ್ಸಿಬಿಷನ್ ಸರಣಿಯಲ್ಲಿ ಆಟವಾಡಿದ್ದರು. ಈಗಾಗಲೇ ಟೆನಿಸ್ ಆಟಗಾರರಾದ ಗ್ರಿಗೋರ್ ಡಿಮಿಟ್ರೋವ್, ಬೊರ್ನೊ ಕೊರಿಚ್ , ವಿಕ್ಟರ್ ಟ್ರೊಸ್ಕಿ ಅವರಿಗೆ ಕೋವಿಡ್-೧೯ಸೋಂಕು ತಗಲಿದ್ದ ಬಗ್ಗೆ ವರದಿಯಾಗಿದ್ದನ್ನಿಲ್ಲಿ ಸ್ಮರಿಸಬಹುದು.

LEAVE A REPLY

Please enter your comment!
Please enter your name here