Thursday, August 11, 2022

Latest Posts

ವಿಶ್ವದ ಮೊದಲ ಕೊರೋನಾ ಲಸಿಕೆ ‘ಸ್ಪುಟ್ನಿಕ್’ ಗೆ 20 ದೇಶಗಳಿಂದ ಬೇಡಿಕೆ!

ಮಾಸ್ಕೋ: ರಷ್ಯಾ ಕೊರೋನಾ ನಿಗ್ರಹಕ್ಕಾಗಿ ಮಂಗಳವಾರ ತನ್ನ ಕೋವಿಡ್ ಲಸಿಕೆ ನೊಂದಾಯಿಸಿದ ಘೋಷಣೆ ಮಾಡಿದ ಬಳಿಕ ಇದಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಸರ್ಕಾರಿ ಸ್ವಾಮ್ಯದ ಗಾಮೇಲಿಯಾ ರಾಷ್ಟ್ರೀಯ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ರಷ್ಯನ್​ ವಿದೇಶಗಳಿಂದಲೂ ಭಾರಿ ಬೇಡಿಕೆ ವ್ಯಕ್ತವಾಗಿದೆ. ಆರಂಭಿಕ ಹಂತದಲ್ಲಿ 20 ದೇಶಗಳು 100 ಕೋಟಿ ಡೋಸ್​ಗೆ ಬೇಡಿಕೆ ಸಲ್ಲಿಸಿವೆ .
ವಿದೇಶಗಳ ಸಹಭಾಗಿತ್ವದಲ್ಲಿ ಐದು ದೇಶಗಳಲ್ಲಿ ಪ್ರತಿವರ್ಷ 50 ಕೋಟಿ ಡೋಸ್​ ಲಸಿಕೆಗಳನ್ನು ಉತ್ಪಾದಿಸಲು ರಷ್ಯಾ ಸಿದ್ಧವಿದೆ ಎಂದು ಡಿಮಿಟ್ರಿಯೇವ್​ ಘೋಷಿಸಿದ್ದಾರೆ.
ಈ ಲಸಿಕೆಗೆ ಸ್ಪುಟ್ನಿಕ್​ ಉಪಗ್ರಹದ ನೆನಪಿನಲ್ಲಿ ಸ್ಪುಟ್ನಿಕ್​ ವಿ ಎಂದು ಹೆಸರಿಸಿದೆ ಸಚಿವ ಕಿರಿಲ್ ಡಿಮಿಟ್ರಿಯೇವ್​ ತಿಳಿಸಿದ್ದಾರೆ.
ಜತೆಗೆ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ಬುಧವಾರ ( ಆಗಸ್ಟ್​ 12) ಆರಂಭವಾಗಲಿದೆ ಹಾಗೂ ಬೃಹತ್​ ಪ್ರಮಾನದಲ್ಲಿ ಲಸಿಕೆ ಉತ್ಪಾದನೆ ಕಾರ್ಯಕ್ಕೆ ಸೆಪ್ಟೆಂಬರ್​ನಲ್ಲಿ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಲಸಿಕೆಯನ್ನು ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲಾಗಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿ ಭಾಗಿಯಾದ ಎಲ್ಲ 38 ಜನರಲ್ಲಿಯೂ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದನ್ನು ಗಮನಿಸಿರುವುದಾಗಿ ರಷ್ಯಾ ರಕ್ಷಣಾ ಸಚಿವಲಯ ಹೇಳಿದೆ.
ಮೊದಲು ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಗಳ ಮೇಲೆ ಪ್ರಯೋಗಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss