spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಶ್ವನಾಥ್ ಅವರಿಗೆ ಟಿಕೆಟ್ ಕೈ ತಪ್ಪಿದರೂ , ಪಕ್ಷ ಅವರನ್ನು ಕೈಬಿಡಲ್ಲ: ಸಚಿವ ಜಗದೀಶ ಶೆಟ್ಟರ್

- Advertisement -Nitte

ಕೊಪ್ಪಳ: ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರಿಗೆ ಟಿಕೆಟ್ ಕೈ ತಪ್ಪಿದರೂ ಕೂಡ ಮುಂದಿನ ದಿನಮಾನಗಳಲ್ಲಿ ಪಕ್ಷ ಅವರಿಗೆ ಸೂಕ್ತ ಸ್ಥಾನಮಾನ ಕೊಟ್ಟು ಗೌರವಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರು ಹೇಳಿದರು.
ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಕೋರ್ ಕಮೀಟಿಯಿಂದ ಹಲವರ ಇವರ ಹೆಸರೂ ಸೇರಿದಂತೆ ಹಲವರ ಹೆಸರು ಚರ್ಚೆಗೆ ಬಂದಿದ್ದವು. ಪಕ್ಷದ ಹೈಕಮಾಂಡ್ ಒಂದು ನಿರ್ಧಾರ ಮಾಡಿ ಈಗ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. ಆ ಅಭ್ಯರ್ಥಿಗಳನ್ನ ನಾವು ಒಪ್ಪಲಿದ್ದೇವೆ. ವಿಶ್ವನಾಥ್ ಅವರು ನಮ್ಮನ್ನ ಬೆಂಬಲಿಸಿ ಬಂದಿದ್ದಾರೆ. ಪಕ್ಷ ಅವರನ್ನ ಎಂದೂ ಕೈ ಬಿಡಲ್ಲ. ಅವರಿಗೆ ಸೂಕ್ತವಾಗಿ ಗೌರವಿಸಲಿದೆ ಎಂದರು.
ಹೈಕಮಾಂಡ್ ಮಟ್ಟದಲ್ಲಿ ಏನು ನಡೆದಿದೆ‌ ಎನ್ನುವ ವಿಚಾರವನ್ನ ನಾನು ಬಹಿರಂಗವಾಗಿ ಹೇಳಲು ಇಚ್ಛೆಪಡಲ್ಲ. ಪಕ್ಷ ಒಂದು ನಿರ್ಧಾರ ಕೈಗೊಂಡಿದೆ ಎಂದರೆ ನಾವು ಅದನ್ನ ಒಪ್ಪಲಿದ್ದೇವೆ. ಇದಕ್ಕಿಂತ ಹೆಚ್ಚೇನು ಮಾತಾಡಲ್ಲ ಎಂದರು.
ಇನ್ನೂ ಬಳ್ಳಾರಿ ಜಿಂದಾಲ್ ಕಾರ್ಖಾನೆಯಲ್ಲಿ ಕೊರೊನಾ ಸೋಂಕು ಹೆಚ್ಚಳ ವಿಚಾರವಾಗಿ ಈಗಾಗಲೆ ಜಿಂದಾಲ್ ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಒಳಗೇ ಇರುವಂತೆ ಸೂಚನೆ ನೀಡಿದೆ. ಅಲ್ಲಿ ಒಳಗೆ ಯಾರೂ ಹೋಗುವಂತಿಲ್ಲ. ಅಲ್ಲಿನ ಕಾರ್ಮಿಕರು ಹೊರಗೆ ಯಾರೂ ಬರುವಂತಿಲ್ಲ ಎನ್ನುವ ಸೂಚನೆ ನೀಡಿದೆ. ಡಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಇನ್ನೂ ಜಿಂದಾಲ್ ಸೇರಿದಂತೆ ಹಲವು ಸ್ಟೀಲ್ ಕಾರ್ಖಾನೆ ಬಂದ್ ಮಾಡಲು ಕಷ್ಟಸಾಧ್ಯ ಏಕೆಂದರೆ ಬಂದ್ ಮಾಡಲು ಆರು ತಿಂಗಳು ಬೇಕು‌. ಬಂದ್ ಆದ ಬಳಿಕ ಆರಂಭ ಮಾಡಲು ನಾಲ್ಕಾರು ತಿಂಗಳು ಬೇಕು. ಅದಕ್ಕೆ ಕೆಲವೊಂದು ಪ್ರೊಸಿಜರ್ ಇವೆ. ಏಕಾ ಏಕಿ ಬಂದ್ ಮಾಡುವುದು ಕಷ್ಟ. ಆದರೆ ಕೈಗಾರಿಕೆಯೊಳಗೆ ಕೊರೊನಾ ನಿಯಂತ್ರಣಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಅದನ್ನು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭ ಸಂಸದ ಸಂಗಣ್ಣ ಕರಡಿ, ಮುಖಂಡ ಅಮರೇಶ ಕರಡಿ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಸೇರಿ ಇತರರು ಉಪಸ್ಥಿತರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss