Wednesday, August 17, 2022

Latest Posts

ವಿಶ್ವವಿಖ್ಯಾತ ಐಫೆಲ್‌ ಟವರ್‌ಗೆ ಬಾಂಬ್ ಬೆದರಿಕೆ ಕರೆ: ಬಿಗಿ ಪೊಲೀಸ್ ಭದ್ರತೆ!

ಪ್ಯಾರಿಸ್‌: ವಿಶ್ವವಿಖ್ಯಾತ ಐಫೆಲ್‌ ಟವರ್‌ಗೆ ಬಾಂಬ್‌ ಇಟ್ಟಿರುವುದಾಗಿ ಪ್ಯಾರಿಸ್‌ನ ಪೊಲೀಸರಿಗೆ ಬುಧವಾರ ಬೆದರಿಕೆ ಕರೆ ಬಂದಿದೆ.
ಈ ಹಿನ್ನೆಲೆ ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಐಫೆಲ್‌ ಟವರ್‌ ಹಾಗೂ ಸುತ್ತಲಿದ್ದ ಜನರನ್ನು ಖಾಲಿ ಮಾಡಿಸಿದ್ದಾರೆ.
ಐಫೆಲ್‌ ಟವರ್‌ನ್ನು ನಿರ್ವಹಿಸುವ ಕಂಪನಿಯ ವಕ್ತಾರರು ಬಾಂಬ್‌ ಬೆದರಿಕೆ ಕರೆ ಬಂದಿರುವುದನ್ನು ಖಚಿತಪಡಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.
ಪ್ಯಾರಿಸ್‌ನ ವಿಶ್ವವಿಖ್ಯಾತ ಐಫೆಲ್ ಟವರ್‌ಗೆ ಸಾವಿರಾರು ಜನ ಭೇಟಿ ನೀಡುತ್ತಾರೆ. ಕೊರೋನಾ ಹಿನ್ನೆಲೆ ತಿಂಗಳುಗಟ್ಟಲೇ ಮುಚ್ಚಿದ್ದ ಐಫೆಲ್‌ ಟವರ್‌ ಸೋಂಕಿನ ತೀವ್ರತೆ ಕಡಿಮೆಯಾದ ನಂತರ ಮತ್ತೆ ಪ್ರವಾಸಿಗರಿಗೆ ತೆರೆಯಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!