ನ್ಯೂಯಾರ್ಕ್: ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲ ಪ್ರದೇಶಗಳನ್ನು ಖಾಲಿ ಮಾಡಬೇಕು ಎಂದು ಪಾಕ್ ಗೆ ಭಾರತವು ಖಡಕ್ಕಾಗಿ ವಾರ್ನಿಂಗ್ ಮಾಡಿದೆ.
ವಿಶ್ವಸಂಸ್ಥೆಯಲ್ಲಿ ಇಂದು ಭಾರತ ಶಾಶ್ವತ ನಿಯೋಗದಲ್ಲಿನ ಭಾರತದ ಮೊದಲ ಕಾರ್ಯದರ್ಶಿ ಶ್ರೀ ಮಿಜಿತೊ ವಿನಿಟೊ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾಡಿರುವ ಭಾಷಣ ಸುಳ್ಳು, ತಪ್ಪು ಮಾಹಿತಿ ಎಂದು ಖಂಡಿಸಿರುವ ಭಾರತ, ಆಕ್ರಮಿತ ಕಾಶ್ಮೀರವನ್ನು ಸಂಪೂರ್ಣವನ್ನು ತೆರವುಗೊಳಿಸುವಂತೆ ಆಗ್ರಹಿಸಿದೆ.
ಕಾಶ್ಮೀರದಲ್ಲಿ ಉಳಿದಿರುವ ಏಕೈಕ ವಿವಾದವು ಕಾಶ್ಮೀರದ ಭಾಗಕ್ಕೆ ಸಂಬಂಧಿಸಿದೆ, ಅದು ಇನ್ನೂ ಪಾಕಿಸ್ತಾನದ ಅಕ್ರಮ ಆಕ್ರಮಣದಲ್ಲಿದೆ. ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಎಲ್ಲ ಪ್ರದೇಶಗಳನ್ನು ಖಾಲಿ ಮಾಡುವಂತೆ ನಾವು ಕರೆ ನೀಡುತ್ತೇವೆ ಎಂದು ವಿನಿತೋ ಹೇಳಿದ್ದಾರೆ.
ಭಯೋತ್ಪಾದನೆಗೆ ನೈತಿಕ, ಹಣಕಾಸು ಮತ್ತು ಇತರ ನೆರವು ಒದಗಿಸುವುದನ್ನು ಬಿಟ್ಟು ಸಾಮಾನ್ಯ ರಾಷ್ಟ್ರವಾಗಿರುವಂತೆ ಸೂಚಿಸಿದೆ.