Thursday, August 11, 2022

Latest Posts

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಸಿಗಬೇಕಿದೆ ಹೆಚ್ಚಿನ ಮಹತ್ವ: ಪ್ರಧಾನಿ ಮೋದಿ

ಹೊಸದಿಲ್ಲಿ: ಭಾರತ ಶಾಂತಿಯನ್ನು ಪ್ರೀತಿಸುವ ದೇಶ. ಈ ಶಾಂತಿ ಸ್ಥಾಪನೆಗಾಗಿ ಹಲವು ಸೈನಿಕರನ್ನು ಕಳೆದುಕೊಂಡಿದ್ದೇವೆ. ವಿಶ್ವಸಂಸ್ಥೆಗೆ ಭಾರತ ನೀಡಿದ ಕೊಡುಗೆ ದೊಡ್ಡದು. ಹಾಗೇ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಹೆಚ್ಚಿನ ಮಹತ್ವ ಸಿಗಬೇಕು. ನಮ್ಮ ದೇಶದ ಪಾತ್ರಕ್ಕೆ ಇನ್ನಷ್ಟು ಆದ್ಯತೆ ನೀಡಬೇಕು. ಆದರೆ ವಿಶ್ವಸಂಸ್ಥೆ ಇದಕ್ಕಾಗಿ ತೆಗೆದುಕೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದರು. ವಿಶ್ವಸಂಸ್ಥೆಯಿಂದ ಭಾರತ ಹೊರಗಿಡಲು ಕಾರಣವೇನು? ಇಡೀ ವಿಶ್ವವನ್ನೇ ಒಂದು ಕುಟುಂಬ ಎಂದು ಹೇಳಲಾಗುತ್ತದೆ. ಜಾಗತಿಕ ಶಾಂತಿಗಾಗಿ ಭಾರತ ಶ್ರಮಿಸುತ್ತಿದೆ. ಮಾನವ ಕಲ್ಯಾಣವೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಖಡಕ್ ಸಂದೇಶ ನೀಡಿದರು.
75ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆ ಚರ್ಚೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಆನ್‌ಲೈನ್‌ ಭಾಷಣ ಮಾಡಿದರು.
ವಿಶ್ವ ಸಂಸ್ಥೆಯ ಸಂಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂಬುದು ಹೆಮ್ಮೆಯ ಸಂಗತಿ. ಇದೊಂದು ಐತಿಹಾಸಿಕ ಸಂದರ್ಭವಾಗಿದ್ದು, 1.3 ಬಿಲಿಯನ್​ ಭಾರತೀಯರ ಮನದ ಮಾತನ್ನು ಹಂಚಿಕೊಳ್ಳಲು ನಾನು ಈ ಜಾಗತಿಕ ವೇದಿಕೆಗೆ ಆಗಮಿಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಳೆದ 75 ವರ್ಷಗಳಲ್ಲಿ ಯುಎನ್‌ನ ಕಾರ್ಯಕ್ಷಮತೆಯ ಬಗ್ಗೆ ನಾವು ವಸ್ತುನಿಷ್ಠ ಮೌಲ್ಯಮಾಪನ ಮಾಡಬೇಕಾದರೆ, ನಾವು ಹಲವಾರು ಸಾಧನೆಗಳನ್ನು ನೋಡುತ್ತೇವೆ. ಆದರೆ ಅದೇ ಸಮಯದಲ್ಲಿ, ಕೆಲಸದ ಬಗ್ಗೆ ಗಂಭೀರವಾದ ಆತ್ಮಾವಲೋಕನದ ಅಗತ್ಯವನ್ನು ಸೂಚಿಸುವ ಹಲವಾರು ನಿದರ್ಶನಗಳಿವೆ ಎಂದು ಯುಎನ್‌ಜಿಎ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದರು.
ಕಳೆದ 7-8 ತಿಂಗಳಿನಿಂದ ನಾವು ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ವಿಶ್ವ ಸಂಸ್ಥೆ ಎಲ್ಲಿದೆ ಏನು ಮಾಡುತ್ತಿದೆ. ಕೊರೊನಾ ವಿರುದ್ಧದ ಸಮರದಲ್ಲಿ ವಿಶ್ವಸಂಸ್ಥೆ ಪಾತ್ರವೇನು, ವಿಶ್ವಸಂಸ್ಥೆ ಏನು ಮಾಡುತ್ತಿದೆ ಎಂದು ಮೋದಿ ಪ್ರಶ್ನಿಸಿದರು. ಮ್ಮ ಮುಂದೆ ಬೇರೆ ಬೇರೆ ಸವಾಲುಗಳಿವೆ. ನಮ್ಮ ಅವಶ್ಯಕತೆ, ಸವಾಲುಗಳೆಲ್ಲವೂ ಹೊಸತು. ಹೀಗಾಗಿ ವಿಶ್ವಸಂಸ್ಥೆಯ ಸ್ವರೂಪ ಬದಲಾಗಬೇಕಾಗಿದ್ದು, ಸುಧಾರಣೆ ಅಗತ್ಯವಾಗಿದೆ ಎಂದು ನಮೋ ಹೇಳಿದರು. ಬದಲಾವಣೆಗಾಗಿ ನಾವು ಎಲ್ಲಿಯವರೆಗೆ ಕಾಯಬೇಕು ಎಂದು ಇದೇ ವೇಳೆ ಪ್ರಶ್ನೆ ಮಾಡಿದರು. ಭಾರತಕ್ಕೆ ವಿಶ್ವಸಂಸ್ಥೆ ಮೇಲೆ ನಂಬಿಕೆ ಇದೆ. ನಂಬಿಕೆ ಇರುವ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ತಿಳಿಸಿದರು.
ನಾವು ಯಾವಾಗಲೂ ಮಾನವಕುಲದ ಹಿತಾಸಕ್ತಿಗಾಗಿ ಕೆಲಸ ಮಾಡಿದ್ದೇವೆ. ಒಂದು ದೇಶಕ್ಕೆ ಭಾರತವು ನೀಡುವ ನಡವಳಿಕೆ ಮೂಲಕ ಯಾವುದೇ ಮೂರನೇ ದೇಶದ ವಿರುದ್ಧವಾಗಿದ್ದೇವೆ ಎಂದು ಹೇಳುತ್ತಿಲ್ಲ. ಕೆರಳಿದ ಸಾಂಕ್ರಾಮಿಕ ರೋಗದ ಈ ಕಷ್ಟದ ಸಮಯದಲ್ಲೂ, ಭಾರತದ ಔಷಧೀಯ ಉದ್ಯಮವು 150 ಕ್ಕೂ ಹೆಚ್ಚು ದೇಶಗಳಿಗೆ ಅಗತ್ಯ ಔಷಧಿಗಳನ್ನು ಕಳುಹಿಸಿದೆ ಎಂದರು.
ಈ ವೇಳೆ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಿಸುವ ದೇಶವಾಗಿ, ನಾನು ಇಂದು ಜಾಗತಿಕ ಸಮುದಾಯಕ್ಕೆ ಇನ್ನೂ ಒಂದು ಭರವಸೆ ನೀಡಲು ಬಯಸುತ್ತೇನೆ. ಈ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಎಲ್ಲಾ ಸಹಾಯ ಮಾಡಲು ಭಾರತದ ಲಸಿಕೆ ಉತ್ಪಾದನೆ ಮತ್ತು ವಿತರಣಾ ಸಾಮರ್ಥ್ಯವನ್ನು ಬಳಸಲಾಗುತ್ತದೆ ಎಂದಿದರು.
ನಾವು ಮೂರನೇ ವಿಶ್ವ ಯುದ್ಧ ತಡೆದಿದ್ದೇವೆ, ಆದರೆ ಬೇರೆ ಬೇರೆ ರೂಪದಲ್ಲಿ ಯುದ್ಧ ಸಂಭವಿಸಬಹುದು. ಭಯೋತ್ಪಾದನೆಯು ವಿಶ್ವವನ್ನು ನಲುಗಿಸುತ್ತಿದೆ. ಎಲ್ಲರೂ ಶಿಖಾರಿಯಾಗುತ್ತಿದ್ದಾರೆ ಎಂದು ಮೋದಿ ಗಂಭೀರತೆಯನ್ನು ಎಚ್ಚರಿಸಿದ್ದಾರೆ.
ನಾವು ಬಲಶಾಲಿಯಾಗಿದ್ದಾಗ, ನಾವು ಎಂದಿಗೂ ಜಗತ್ತಿಗೆ ಬೆದರಿಕೆ ಒಡ್ಡಲಿಲ್ಲ, ನಾವು ದುರ್ಬಲರಾಗಿದ್ದಾಗ ಎಂದಿಗೂ ಪ್ರಪಂಚದ ಮೇಲೆ ಹೊರೆಯಾಗುವುದಿಲ್ಲ. ದೇಶದಲ್ಲಿ ಆಗುತ್ತಿರುವ ಪರಿವರ್ತನೆಯ ಬದಲಾವಣೆಗಳು ವಿಶ್ವದ ಬಹುಪಾಲು ಭಾಗದ ಮೇಲೆ ಪರಿಣಾಮ ಬೀರುವಾಗ ಒಂದು ದೇಶ ಎಷ್ಟು ಸಮಯ ಕಾಯಬೇಕಾಗುತ್ತದೆ.
ಭಾರತ ಎಂದಿಗೂ ವಿಶ್ವ ಶಾಂತಿ, ಮಾನವೀಯತೆ ರಕ್ಷಣೆಗೆ ನಿಲ್ಲಲಿದೆ. ಭಯೋತ್ಪಾದನೆ ವಿರುದ್ಧ, ಡ್ರಗ್ಸ್ ಹಾಗೂ ಮನಿ ಲಾಂಡರಿಂಗ್ ವಿರುದ್ಧ ಹೋರಾಡಲಿದೆ .
ಮಹಿಳಾ ಉದ್ಯಮಶೀಲತೆ ಮತ್ತು ನಾಯಕತ್ವವನ್ನು ಉತ್ತೇಜಿಸಲು ಭಾರತದಲ್ಲಿ ದೊಡ್ಡ ಪ್ರಮಾಣದ ಪ್ರಯತ್ನಗಳು ನಡೆಯುತ್ತಿವೆ. ಭಾರತೀಯ ಮಹಿಳೆಯರು ಇಂದು ವಿಶ್ವದ ಅತಿದೊಡ್ಡ ಸೂಕ್ಷ್ಮ ಹಣಕಾಸು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಹಣಕಾಸು ಯೋಜನೆ, ಮಹಿಳೆಯರಿಗೆ 26 ವಾರಗಳ ವೇತನ ಹೆರಿಗೆ ರಜೆ ನೀಡುವ ದೇಶಗಳಲ್ಲಿ ಭಾರತವೂ ಒಂದು ಎಂದು ಮೋದಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss