ವಾಷಿಂಗ್ಟನ್: ಕೊರೋನಾ ಮಹಾಮಾರಿ ನಿರ್ವಹಣೆಗೆ ವಿಶ್ವ ಆರೋಗ್ಯ ಸಂಸ್ಥೆ 30 ದಿನಗಳಲ್ಲಿ ಪರಿಹಾರ ಕಂಡುಕೊಳ್ಳದಿದ್ದರೆ ವಿಶ್ವ ಆರೋಗ್ಯ ಸಂಸ್ಥೆ ಗೆ ಯುಎಸ್ ನೀಡುವ ಹಣವನ್ನು ಸ್ಥಗಿತಗೊಳಿಸುವುದಲ್ಲದೆ ಯುನೈಟೆಡ್ ಸ್ಟೇಟ್ಸ್ ಸದಸ್ಯತ್ವವನ್ನು ಮರುಪರಿಶೀಲಿಸುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಏಕಾಏಕಿ ವಿಶ್ವದಾದ್ಯಂತ ಕೊರೋನಾ ಹೆಚ್ಚಾಗಿದ್ದು ಚೀನಾ ನೀಡುವ ತಪ್ಪು ಮಾಹಿತಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಬೆಂಬಲಿಸುತ್ತಿದೆ ಎಂಬ ಕಾರಣಕ್ಕೆ ಕಳೆದ ತಿಂಗಳು ನೀಡಬೇಕಾಗಿದ್ದ ಹಣವನ್ನು ತಡೆಹಿಡಿದು ಎಚ್ಚರಿಕೆ ನೀಡಲಾಗಿತ್ತು.
ಆದರೆ WHO ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದು ಇದೀಗ ಟ್ರಂಪ್ 30 ದಿನಗಳಲ್ಲಿ WHO ಪ್ರಮುಖ ಸುಧಾರಣೆಗೆ ಬದ್ದವಾಗಿಲ್ಲವಾದರೆ ಯುನೈಟೆಡ್ ಸ್ಟೇಟ್ಸ್ ನಿಧಿಯನ್ನು ತಡೆಯುವುದಾಗಿ ಎಚ್ಚರಿಸಿದ್ದಾರೆ. ಈ ಕುರಿತು ಪತ್ರವೊಂದನ್ನು ಟ್ವಿಟರ್ ನಲ್ಲಿ ಶೇರ್ ಮಾಡಿರುವ ಟ್ರಂಪ್ ಕೊರೋನಾ ನಿಭಾಯಿಸುವಲ್ಲಿ WHO ಕಳಪೆ ಕೆಲಸ ಮಾಡುತ್ತಿದೆ. ಇದು ಎಲ್ಲರಿಗೂ ದುಃಖಕರವಾದ ವಿಚಾರ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
https://twitter.com/realDonaldTrump/status/1262577580718395393?s=20