Sunday, June 26, 2022

Latest Posts

ವಿಶ್ವ ಪರಿಸರ ದಿನ: ಕೊರೋನಾ ಕಲಿಸಿದ ಪರಿಸರ ಪಾಠ

ಬೆಂಗಳೂರು: ಲಾಕ್ ಡೌನ್ ನಿಂದಾಗಿ ದೇಶಾದ್ಯಂತ ಮಾಲಿನ್ಯ ಕಡಿಮೆಯಾಗಿದ್ದು, ವಾಯು, ಜಲ ಮಾಲಿನ್ಯಗಳ ಕಣಗಳು ಇಳಿಕೆಯಾಗುತ್ತಿದೆ.

ನಮ್ಮ ದೇಶದಲ್ಲಿ ನದಿಗಳಿಗೆ ಧಾರ್ಮಿಕ ಪ್ರಾಶಸ್ತ್ಯವಿದೆ. ನದಿಗಳನ್ನೂ ದೇವರೆಂದು ಪೂಜಿಸಲಾಗುತ್ತೆ. ಆದರೂ ವರ್ಷಗಳಿಂದ ನದಿ ಮಾಲಿನ್ಯ ಬಗೆಹರೆಯದ ಸಮಸ್ಯೆಯಾಗಿ ಉಳಿದಿದೆ. ನದಿ ನೀರು ಸ್ವಚ್ಛಗೊಳಿಸಲು ಸರ್ಕಾರಗಳು ಕೂಡ ಕೋಟಿ ಕೋಟಿ ಖರ್ಚು ಮಾಡುತ್ತಿದೆ.  ಸ್ವಚ್ಛತೆ ಕಾಪಾಡಲು ಕಠಿಣ ಕ್ರಮ ಕೈಗೊಂಡಿವೆ. ಆದರೂ ಸರ್ಕಾರಿ ಕ್ರಮಗಳು ಸಕಾರಾತ್ಮಕ ಫಲಿತಾಂಶ ತಂದುಕೊಡಲು ವಿಫಲವಾಗಿವೆ. ಹಾಗಾಗಿ ಸರ್ಕಾರಗಳಿಂದ ಸಾಧ್ಯವಾಘದ ಕೆಲಸವು, ಲಾಖ್ ಡೌನ್ ವೇಳೆ ಸಾಧ್ಯವಾಗಿದೆ. ಸೋಂಕಿನ ವಿರುದ್ಧ ಹೋರಾಡಲೆಂದೇ ಲಾಕ್ ಡೌನ್ ಘೋಷಿಸಲಾಗಿದ್ದರೂ, ಪ್ರಕೃತಿ ಪಾಲಿಗೆ ವರದಾನವಾಗಿದೆ. ವಾಯುಗುಣಮಟ್ಟದ ಜನತೆ ನದಿ ನೀರಿನ ಗುಣಮಟ್ಟವೂ ಗಮನಾರ್ಹವಾಗಿದೆ.

60 ದಿನಗಳಲ್ಲಿ ಯಮುನೆ ಸ್ವಚ್ಛ: ಕಳೆದ 25 ವರ್ಷಗಳಲ್ಲಿ 5 ಸಾವಿರ ಕೋಟಿ ರೂ ಖರ್ಚು ಮಾಡಿಯೂ ಯಮುನಾ ನದಿ ನೀರನ್ನು ಸರ್ಕಾರಗಳಿಂದ ಸ್ವಚ್ಛ ಮಾಡಲು ಸಾಧ್ಯವಾಗಲಿಲ್ಲ. ಆದರೆ ಕೇವಲ 60 ದಿನದಲ್ಲೇ ಯಮುನಾ ನದಿ ನೀರಿನ ಗುಣಮಟ್ಟ ಗಮನಾರ್ಹವಾಗಿ ಸುಧಾರಣೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ನೀಲಿ ಬಣ್ಣಕ್ಕೆ ಮರಳಿದ ಗಂಗೆ: ದೇಶದ ಅತಿ ಉದ್ದದ ನದಿಯಾಗಿರುವ ಗಂಗೆ, ಅನೇಕ ಪ್ರದೇಶಗಳಲ್ಲಿ ಕುಡಿಯುವ ಹಾಗೂ ಸ್ನಾನ ಮಾಡಲು ಯೋಗ್ಯವಾಗಿದೆ ಎಂದು ಭಾರತದ ಮಾಲಿನ್ಯ ನಿರ್ವಹಣ ಮಂಡಳಿ ಮಾಹಿತಿ ನೀಡಿದೆ. ಕೈಗಾರಿಕೆಗಳಿಂದ ವಿಷಪೂರಿತ ರಾಸಾಯನಿಕವನ್ನು ನದಿಗೆ ಹರಿಬಿಡಲಾಗುತ್ತಿಲ್ಲ. ಕೃಷ್ಇ ತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ಇನ್ನಿತರೆ ತ್ಯಾಜ್ಯ ನದಿಗಳಿಗೆ ಸುರಿಯಲಾಗುತ್ತಿಲ್ಲ. ಡೀಸಲ್ ಮೋಟರ್ ಬೋಟ್ ಸಂಚಾರಗಳಿಲ್ಲ. ಇದರಿಂದ ಗಂಗಾ ನದಿಯ ಗುಣಮಟ್ಟ ಶೇ.50% ಸುಧಾರಿಸಿದೆ.

ಪ್ರತಿ ವರ್ಷ ದಿಲ್ಲಿಯಲ್ಲಿ ಅಪಘಾತ, ರೋಗ, ಚಳಿ ಸೇರಿ ಹಲವು ಸಮಸ್ಯೆಗಳು ಹೇಗೆ ಜನರ ಜೀವ ತೆಗೆಯುತ್ತವೆಯೋ, ಅದೇ ರೀತಿ ವಾಯು ಮಾಲಿನ್ಯ ಸಹ ಜನರ ಪ್ರಾಣ ಹಿಂಡುತ್ತದೆ, ವಾಯು ಮಾಲಿನ್ಯ ಗುಣಮಟ್ಟ ಸೂಚ್ಯಂಕದ ಪ್ರಕಾರ ದಿಲ್ಲಿಯಲ್ಲಿ ಕಳೆದ ವರ್ಷ ಗುಣಮಟ್ಟ ಅಪಾಯಕಾರಿ ಹಂತ ತಲುಪಿದ್ದಲ್ಲದೆ, ಹಲವು ಜನರ ಪ್ರಾಣ ತೆಗೆದಿತ್ತು. ಕಳೆದ 3 ವರ್ಷದಲ್ಲಿ ವಾಯು ಮಾಲಿನ್ಯದಿಂದ ದಿಲ್ಲಿಯಲ್ಲಿ 31,671 ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ತಿಳಿಸಿದೆ.

ಲಾಕ್ ಡೌನ್ ನಲ್ಲಿ ವಿಶ್ವದ ವಾಯು ಗುಣಮಟ್ಟ: ಪಿಎಂ 2.5 ಇಳಿಕೆ

ದಿಲ್ಲಿ – 62%
ದಕ್ಷಿಣಕೊರಿಯಾ – 54%
ಚೀನಾ – 61%
ಅಮೆರಿಕ – 31%
ಲಂಡನ್, ಬ್ರಟನ್ – 51%
ನ್ಯೂಯಾರ್ಕ್, ಅಮೆರಿಕ – 25%
ಮುಂಬೈ – 34%
ಸ್ಪೇನ್ -11%

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss