Saturday, July 2, 2022

Latest Posts

ವಿಶ್ವ ವಿಖ್ಯಾತ ಪ್ರೇಮ ಸ್ಮಾರಕ ತಾಜ್ ಮಹಲ್ ಗೆ ಭೇಟಿ ನೀಡಿದ ಟ್ರಂಪ್ ಕುಟುಂಬ

ಆಗ್ರಾ: ಸಾವಿಲ್ಲದ ಮರಣ ಶಾಸನ, ಭಾರತ ಸಂಸ್ಕೃತಿಯ ಸೌಂದರ್ಯದ ಪ್ರತೀಕ ತಾಜ್ ಮಹಲ್ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.

ಅಹಮದಬಾದ್ ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮ ಮುಗಿದ ಬಳಿಕ ಡೊನಾಲ್ಡ್ ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ ಹಾಗೂ ಪುತ್ರಿ ಇವಾಂಕಾ ಜೊತೆ ವಿಶ್ವದ ಅದ್ಭುತಗಳಲ್ಲೊಂದಾದ ಪ್ರೇಮ ಸ್ಮಾರಕ ತಾಜ್ ಮಹಲ್ ಗೆ ಭೇಟಿ ನೀಡಿದರು.

ವಿಮಾನದಲ್ಲಿ ಬಂದಿಳಿದ ಟ್ರಂಪ್ ಕುಟುಂಬವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಸ್ವಾಗತಿಸಿದರು. ನಂತರ ಟ್ರಂಪ್ ಕುಟುಂಬ ಆಗ್ರಾದಿಂದ ತಾಜ್ ಮಹಲ್ ಗೆ ತೆರಳುವ ಮಾರ್ಗದುದಕ್ಕೂ ಭಾರತ ಮತ್ತು ಅಮೆರಿಕ ಧ್ವಜಗಳು ಹಾರಡುತ್ತಿದ್ದವು.

ತಾಜ್ ಮಹಲ್ ನ ವೈಶಿಷ್ಯತೆ ಹಾಗೂ ಅದರ ಇತಿಹಾಸದ ಬಗ್ಗೆ ಅಲ್ಲಿನ ಪ್ರವಾಸ ಮಾರ್ಗದರ್ಶಿ ಟ್ರಂಪ್ ಕುಟುಂಬಕ್ಕೆ ವಿವರಿಸಿದರು. ಬಳಿಕ ಸಂದರ್ಶಕ ಪುಸ್ತಕದಲ್ಲಿ ಟ್ರಂಪ್, ತಾಜ್ ಮಹಲ್ ಭಾರತದ ಸ್ಪೂರ್ತಿದಾಯಕ ಸ್ಥಳವಾಗಿದ್ದು, ಭಾರತದ ವೈವಿಧ್ಯತೆಯ ಅನಂತತೆಯ ಪ್ರತೀಕ ಎಂದು ಬರೆದಿದ್ದಾರೆ. ಟ್ರಂಪ್ ಹಾಗೂ ಕುಟುಂಬದ ಸದಸ್ಯರು ತಾಜ್ ಮಹಲ್ ಎದುರು ಫೋಟೋ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss