Monday, July 4, 2022

Latest Posts

ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ 2021ನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ 2021ನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್​​ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಮೋದಿ,  ಸುಸ್ಥಿರ ಅಭಿವೃದ್ಧಿಯನ್ನು ಕಾಯ್ದುಕೊಂಡಿರುವ ಟಿ.ಇ.ಆರ್​.ಐ.ನ್ನು ಅಭಿನಂದಿಸಿದರು. ಇಂತಹ ಜಾಗತಿಕ ವೇದಿಕೆಗಳು ಒಳ್ಳೆಯ ಭವಿಷ್ಯಕ್ಕೆ ಬಹಳ ಮುಖ್ಯವಾಗಿದೆ ಎಂದರು.

ಜನರ ಆರೋಗ್ಯ ಮತ್ತು ಗ್ರಹದ ಆರೋಗ್ಯ ಒಂದಕ್ಕೊಂದು ಸಂಬಂಧ ಹೊಂದಿದೆ. ಈ ಎರಡೂ ವಿಷಯಗಳೂ ಬಹಳ ಮಹತ್ವದ್ದು ಎಂದು ಹೇಳಿದರು.

ನಮ್ಮ ಇತಿಮಿತಿಗಳನ್ನು ಮೀರಿ ಯೋಚಿಸುವ ಅನಿವಾರ್ಯತೆ ಇದೆ. ಯುವ ಶಕ್ತಿಗಳನ್ನು ಮುಂದೆ ತರಬೇಕಾಗಿದೆ. ಸುಸ್ತಿರ ಅಭಿವೃದ್ಧಿಯತ್ತ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss