ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇಂದು ಆನ್ಲೈನ್ ಮೂಲಕ ಚಾಲನೆ ನೀಡಿದರು.
ಒಂದು ವರ್ಷದ ನಂತರ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಕನಸು ಕೈಗೂಡಿದ್ದು, ಅಭಿಮಾನಿಗಳಿಗೆ ಇದು ಸಂತೋಷದ ಸುದ್ದಿಯಾಗಿದೆ.
ಮೈಸೂರಿನ ಹೊರವಲಯದ ಎಚ್.ಡಿ. ಕೋಟೆಯ ಉದ್ಗೂರು ಗೇಟ್ ಬಳಿಯ ಐದು ಎಕರೆ ಜಾಗದಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗಲಿದೆ. ಜೊತೆಗೆ ಫಿಲಂ ಸಿಟಿ ಕೂಡ ನಿರ್ಮಾಣವಾಗಲಿದೆ ಎನ್ನಲಾಗಿದೆ. ದಶಕದ ನಂತರ ವಿಷ್ಣುವರ್ಧನ್ ಅಭಿಮಾನಿಗಳಿಗೆ ಇದು ಅತೀವ ಸಂತಸ ತಂದಿದೆ.