Wednesday, August 17, 2022

Latest Posts

ವಿಸಾ ನಿಯಮ ಉಲ್ಲಂಘಿಸಿ ಬಂದು ಬೆಳಗಾವಿಯಲ್ಲಿ ಧಾರ್ಮಿಕ ಪ್ರಚಾರ: ಇಂಡೋನೇಷ್ಯಾದ ಹತ್ತು ಮಂದಿ, ದೆಹಲಿಯ ಇಬ್ಬರು ವಶಕ್ಕೆ

ಬೆಳಗಾವಿ: ವೀಸಾ ನಿಯಮ ಉಲ್ಲಂಘಿಸಿ ದೆಹಲಿಯ ಜರ್ಕತ್ ಧರ್ಮ ಸಭೆಯಲ್ಲಿ ಭಾಗವಹಿಸಿ, ಬೆಳಗಾವಿ ಮಹಾನಗರಕ್ಕೆ ಆಗಮಿಸಿ, ಧಾರ್ಮಿಕ ಪ್ರಚಾರ ನಡೆಸಿದ ಆರೋಪ ಮೇಲೆ, ಇಂಡೋನೇಷ್ಯಾದ 10 ಜನರು ಸೇರಿದಂತೆ, ದೆಹಲಿಯ ಇಬ್ಬರನ್ನು ಪೋಲೀಸರು ವಶಕ್ಕೆ ಪಡೆದು ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಈ ಹಿಂದೆಯೇ ಮಾಳಮಾರುತಿ ಪೋಲೀಸರು ಐವರು ಮಹಿಳೆಯರು ಸೇರಿ ಈ ಹನ್ನೆರಡು ಜನರ ವಿರುದ್ಧ ಎಫ್.ಐ.ಆರ್ ದಾಖಲಿಸಿಕೊಂಡು ಮಸೀದಿಯೊಂದರಲ್ಲಿ ಇವರನ್ನು ಕ್ವಾರಂಟೈನ್ ಮಾಡಿಸಿ, ಚಿಕಿತ್ಸೆ ನೀಡಿದ್ದರು.

ಮಂಗಳವಾರ ವೈದ್ಯಕೀಯ ಪರೀಕ್ಷೆ ನಡೆಸಿ, ಈ ಹನ್ನೆರಡು ಜನರನ್ನು ಮಾಳಮಾರುತಿ ಪೋಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ದೆಹಲಿಯ ನಿಜಾಮ್ಮುದ್ದೀನ್ ಜರ್ಕತ್ ಧರ್ಮ ಸಭೆಯಲ್ಲಿ ಭಾಗವಹಿಸಿದ್ದ ಇವರು ಮಾರ್ಚ್ 11 ರಂದು ದೆಹಲಿಯಿಂದ ಬೆಳಗಾವಿಗೆ ಬಂದಿದ್ದರು.

ಇಂಡೋನೇಷ್ಯಾದ 10, ದೆಹಲಿಯ ಇಬ್ಬರಿಂದ ಧರ್ಮ ಪ್ರಚಾರ ನಡೆದಿತ್ತು,ಮಾರ್ಚ್ 11ರಿಂದ ಮಾರ್ಚ್ 16ರವರೆಗೆ ನಗರದ ವಿವಿಧ ಮಸೀದಿಗಳಲ್ಲಿ ಧಾರ್ಮಿಕ ಪ್ರಚಾರ ಮಾಡಿದ ಇವರು, ವೀಸಾ ನಿಯಮ ಉಲ್ಲಂಘನೆ ಆರೋಪದಡಿ 10 ಜನರ ವಿರುದ್ಧ ಏಪ್ರಿಲ್ 10ರಂದು ಮಾಳಮಾರುತಿ ಠಾಣೆಯಲ್ಲಿ ಎಫ್‌.ಐ.ಆರ್ ದಾಖಲಾಗಿತ್ತು, ಮಾರ್ಚ್ 16ರಿಂದ ಜೂನ್ 1ರವರೆಗೆ ಮಸೀದಿಯೊಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದರು. ಕೋವಿಡ್ ವರದಿ ನೆಗೆಟಿವ್ ಹಾಗೂ ಕ್ವಾರಂಟೈನ್ ಅವಧಿ ಮುಕ್ತಾಯ ಹಿನ್ನೆಲೆಯಲ್ಲಿ ಈ 12 ಜನರನ್ನು ಕೋರ್ಟಿಗೆ ಹಾಜರು ಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!