ವೀರಾಜಪೇಟೆ: ವೀರಾಜಪೇಟೆ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿ ಪ್ರಕರಣದಲ್ಲಿ ಎರಡು ಅಂಗಡಿಗಳ ಸಾಕಷ್ಟು ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿವೆ.
ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಶೀನ ಎಂಬವರಿಗೆ ಸೇರಿದ ತರಕಾರಿ ಅಂಗಿಡ ಹಾಗೂ ಕಾರ್ತಿಕ್ರಾಜ್ ಎಲೆಕ್ಟ್ರಿಕಲ್ಸ್ ಅಂಡ್ ಪ್ಲಂಬಿಂಗ್ ಅಂಡಿಗಳು ಬೆಂಕಿಗೆ ತುತ್ತಾಗಿವೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ವಿದ್ಯುತ್ ಸ್ಪರ್ಶಗೊಂಡು ಚಿಕ್ಕದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಅಂಗಡಿ ಮಾಲಕರಿಗೆ ದೂರವಾಣಿ ಸಂಪರ್ಕ ಮಾಡಿ ವಿಷಯ ತಿಳಿಸಿದ್ದಾರೆ. ಈ ವೇಳೆ ಪೊಲೀಸರಿಗೂ ಮತ್ತು ಗೋಣಿಕೊಪ್ಪಲು ಅಗ್ನಿಶಾಮಕ ದಳದವರಿಗೂ ದೂರವಾಣಿ ಮೂಲಕ ಸಂಪರ್ಕಿಸಿದ್ದು, ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದರಾದರೂ ಎರಡು ಅಂಗಡಿಗಳ ಸಾಕಷ್ಟು ಸಾಮಾಗ್ರಿಗಳು ಬೆಂಕಿಗೆ ಆಹುತಿಯಾದವು.