Sunday, July 3, 2022

Latest Posts

ವೀರಾಜಪೇಟೆ| ವಿಷಕಾರಿ ಅಣಬೆ ತಿಂದು ಮಹಿಳೆ ಸಾವು

ವೀರಾಜಪೇಟೆ: ವಿಷಕಾರಿ ಅಣಬೆ ತಿಂದು ಮಹಿಳೆ ಮೃತಪಟ್ಟಿರುವ ಘಟನೆ ವೀರಾಜಪೇಟೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಮೀಪದ ಪೆರುಂಬಾಡಿ ಗ್ರಾಮದ ಮಹಾದೇವಿ ಮತ್ತು ಕುಟುಂಬದವರು ಮಾಕುಟ್ಟ ಕಡೆಯಿಂದ ಪೆರುಂಬಾಡಿಯಲ್ಲಿರುವ ಮನೆಗೆ ಬರುವಾಗ ರಸ್ತೆ ಬದಿಯಲ್ಲಿ ಕಂಡ ಅಣಬೆಯನ್ನು ತಂದು ರಾತ್ರಿ ಸಾಂಬಾರು ಮಾಡಿ ಮನೆಯವರೆಲ್ಲ ಊಟ ಮಾಡಿದ್ದಾರೆ.
ಸ್ವಲ್ಪ ಹೊತ್ತಿನಲ್ಲೇ ಮಹಾದೇವಿ(70) ಅವರ ಸೊಸೆ ಸುನೀತಾ(38) ಹಾಗೂ ನಾಲ್ಕೂವರೆ ವರ್ಷದ ಪುಟ್ಟ ಬಾಲಕಿ ಹರಿದಾ ಅವರುಗಳಿಗೆ ವಾಂತಿ ಶುರುವಾಗಿದೆ. ತಕ್ಷಣ ಮಹದೇವಿ ಅವರ ಪುತ್ರ ಹರೀಶ್ ಎಂಬವರು ಸ್ಥಳೀಯರ ಸಹಕಾರದಿಂದ ವೀರಾಜಪೇಟೆ ಆಸ್ಪತ್ರೆಗೆ ದಾಖಲಿಸಿದರಾದರೂ ಮಹಾದೇವಿ ಎಂಬವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸಂದರ್ಭ ಹರೀಶ್ ಅವರ ಪತ್ನಿ ಸುನೀತಾ ಮತ್ತು ಮಗಳು ಹರಿದಾನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss