ಗದಗ: ಸಾವರ್ಕರ್ ಹೆಸರಿಡದೇ, ರಾಹುಲ್ ಗಾಂಧಿ, ಸೋನಿಯಾಗಾಂಧಿ ಹೆಸರಿಡಬೇಕಾ ಎಂದು ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಾವರ್ಕರ್ ಅವರ ತ್ಯಾಗ ಬಲಿದಾನ, ಕಾಲಾಪಾನಿ ಶಿಕ್ಷೆ, ಸೆಲ್ಯುಲಾರ್ ಜೈಲುವಾಸದ ಬಗ್ಗೆ ಕಾಂಗ್ರೆಸ್ ನವರು ಮೊದಲು ತಿಳಿಯಲಿ. ವೀರ ಸಾವರ್ಕರದ ಬಗ್ಗೆ ಮಾತಾಡುವಂತ ಯೋಗ್ಯತೆ ಒಬ್ಬ ಕಾಂಗ್ರೆಸಿಗರಿಗೂ ಇಲ್ಲ.
ಅವರಿಗೆ ನೆಹರು ಸಂಸ್ಕ್ರತಿ,ಕಾಂಗ್ರೆಸ್ ನೆಹರು ಸಂಸ್ಕ್ರತಿ ಮಾತ್ರ ಗೊತ್ತು ದೇಶದ ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನ ಮಾಡಿದ ಸುಭಾಷ್ ಚಂದ್ರಬೋಸ್, ವೀರ ಸಾವರ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಲೋಕಮಾನ್ಯ ತಿಲಕ ಇವರು ಯಾರೂ ಗೊತ್ತಿಲ್ಲ ಎಂದು ಹೇಳಿದ ಅವರು ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್, ರಾಜೀವ್ ಗಾಂಧಿ ರೋಡ್ ಎಂದು ಹೆಸರುಗಳು ಇದೆ ಆದರೆ, ಎಲ್ಲಾದರೂ ನರೇಂದ್ರ ಮೋದಿ ರೋಡ್, ಯಡಿಯೂರಪ್ಪ ರೋಡ್ ಎಂದು ಇದೆಯಾ ಕಾಂಗ್ರೆಸ್ ನವರದು ಹೇಳುವುದು ಆಚಾರ ತಿನ್ನುವುದು ಬದನೆಕಾಯಿ ಎಂದು ವ್ಯಂಗ್ಯವಾಡಿದರು.