Tuesday, August 16, 2022

Latest Posts

ವೀಳ್ಯದೆಲೆಯಿಂದ ಎಷ್ಟೊಂದು ಉಪಯೋಗವಿದೆ ಗೊತ್ತಾ? ನಿತ್ಯ ಒಂದು‌ ವೀಳ್ಯದೆಲೆ ಸೇವಿಸಿ…

ಭಾರತೀಯ ಸಂಪ್ರದಾಯದಲ್ಲಿ ವೀಳ್ಯೆದೆಲೆಗೆ ಹೆಚ್ಚಿನ ಮಹತ್ವವಿದೆ. ಶುಭಕಾರ್ಯಗಳಿಗೆ ಹಣ್ಣು, ಕಾಯಿಯ ಜೊತೆ ವೀಳ್ಯದೆಲೆಯೂ ಬೇಕೆ ಬೇಕು. ನಿತ್ಯದ ದೇವರ ಸಮರ್ಪಣೆಗೂ ಹಣ್ಣು ಕಾಯಿಗಳ ಜತೆಗೆ ಎಲೆ ಅಡಿಕೆ ಇರಲೇ ಬೇಕು.ಫಲತಾಂಬೂಲ ಕೊಡುವಾಗ ತೆಂಗಿನ ಕಾಯಿಯ ಜತೆಗೆ ವೀಳ್ಯದೆಲೆ ಮತ್ತು ಅಡಿಕೆ ಇಡಲೇ ಬೇಕು. ದೇವರ ಪೂಜೆಯ ಜೊತೆಗೆ ತಾಂಬೂಲಕ್ಕೂ ವೀಳ್ಯದೆಲೆಯನ್ನು ಬಳಸುತ್ತೇವೆ. ಅಡಿಕೆ ಸುಣ್ಣ ಹಾಕಿ ತಿನ್ನುವ ವೀಳ್ಯದೆಲೆಯಿಂದ ಅತಿ ಹೆಚ್ಚಿನ ಉಪಯೋಗಗಳು ದೊರೆಯುತ್ತವೆ. ಹಾಗಾದರೆ ಅವು ಯಾವವು ಎಂದು ತಿಳಿದು ಕೊಳ್ಳೊಣ.

  •  ಗಾಯಗಳು ಆದಾಗ ಕೆಲವೊಂದು ಬಾರಿ ‌ತೊರಿಕೆ ಉಂಟಾಗುತ್ತದೆ. ತುರಿಸಿಕೊಂಡರೆ ಗಾಯ ಮತ್ತಷ್ಟು ಹೆಚ್ಚುತ್ತದೆ. ಆಗ ನಿಂಬೆ ರಸ, ಮತ್ತು ವೀಳ್ಯದೆಲೆಯ ರಸವನ್ನು ಗಾಯದ ಜಾಗಕ್ಕೆ ಹಚ್ಚಿದರೆ ತುರಿಕೆ ಕಡಿಮೆ ಆಗುತ್ತದೆ.
  •  ಚಿಕ್ಕ ಮಕ್ಕಳಿಗೆ ನೆತ್ತಿ ಬಿಸಿಯಾಗಿರುತ್ತದೆ. ಉಷ್ಣ ಕಡಿಮೆ ಮಾಡಲು ವೀಳ್ಯದೆಲೆಯನ್ನು ಬೆಂಕಿಯಲ್ಲಿ ಬಾಡಿಸಿ ಅವರ ನೆತ್ತಿಯ ಮೇಲೆ ಹಾಕ ಬೇಕು. ಅದು ನೆತ್ತಿಯನ್ನು ತಂಪಾಗಿಸುತ್ತದೆ.
  •  ವೀಳ್ಯದೆಲೆ ‘ಕೊಲೆಸ್ಟ್ರಾಲ್’ಮತ್ತು ಗಂಟಲಿನಲ್ಲಿನ ಅಂಟು ಕಫವನ್ನು ತೆಗೆದುಹಾಕುತ್ತದೆ. ಪ್ರತಿ ದಿನ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಅದನ್ನು ಕಾಳು ಮೆಣಸಿನೊಂದಿಗೆ ತಿಂದರೆ ಒಳ್ಳೆಯದು.
  • ಕೆಲವೊಬ್ಬರ ಬಾಯಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ. ಬಾಯಿ ವಾಸನೆ ಬರುವವರು ಪ್ರತಿ ದಿನ ವೀಳ್ಯದೆಲೆ ಸೇವಿಸಿದರೆ ಬಾಯಿಯ ವಾಸನೆ ಕಡಿಮೆಯಾಗುತ್ತದೆ.
  •   ಹಲ್ಲು ನೋವು, ವಸಡುನೋವು ತೀವ್ರವಾದಗ ವೀಳ್ಯದೆಲೆಯ ರಸದಲ್ಲಿ ಲವಂಗದ ಹುಡಿಯನ್ನು ಬೆರೆಸಿ, ಅದರಲ್ಲಿ ಅದ್ದಿದ ಹತ್ತಿಯನ್ನು ನೋವಿರುವ ಭಾಗದಲ್ಲಿ ಇರಿಸಬೇಕು. ಕೆಲ ನಿಮಿಷಗಳಲ್ಲಿ ಕಡಿಮೆ ಅಗುತ್ತದೆ.
  •   ಕೂದಲು ಉದುರುತ್ತಿದ್ದರೆ, ವೀಳ್ಯದೆಲೆಯ ರಸ, ಒಂದೆಲಗದ ರಸ, ಕರಿಬೇವನ್ನಯ ಹಾಕಿ ಕೊಬ್ವರಿ ಎಣ್ಣೆಯಲ್ಲಿ ಕುದಿಸಿ ತಲೆಗೆ ಹಚ್ಚಿಕೊಂಡರೆ ಕೂದಲು ಉದರುವ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
  •  ಮಕ್ಕಳಲ್ಲಿ ನೆಗಡಿ, ಕೆಮ್ಮು , ಕಫ‌ ಉಂಟಾದಾಗ ವೀಳ್ಯದೆಲೆಯ ರಸ, ತುಳಸೀ ರಸ, ದೊಡ್ಡಪತ್ರೆಯ ರಸ ಬೆರೆಸಿ ಜೇನು ತುಪ್ಪ ಸೇರಿಸಿ ನೀಡಿದರೆ ಗುಣಕಾರಿಯಾಗುತ್ತದೆ. ಮಕ್ಕಳಿಗೂ ಇದನ್ನು ಕುಡಿಯುವುದಕ್ಕೆ ಸಿಹಿ ಇರುವುದರಿಂದ ಖುಷಿ
  •  ವೀಳ್ಯದೆಲೆಯಲ್ಲಿ ಲವಂಗ ಮತ್ತು ಕಲ್ಲುಪ್ಪು ಇರಿಸಿ ಮಡಚಿ, ಬಾಯಲ್ಲಿಟ್ಟು ರಸ ಹೀರುವುದರಿಂದ ಗಂಟಲು ಕೆರೆತ, ಒಣಕೆಮ್ಮು ಗಂಟಲು ನೋವು ಗುಣವಾಗುತ್ತದೆ. ಮತ್ತು ಬಹು ಬೇಗ ವಾಸಿಯಾಗುತ್ತದೆ.

ಇನ್ನೂ ಹೆಚ್ಚು ಉಪಯೋಗ ವೀಳ್ಯದೆಲೆಯಲ್ಲಿದೆ. ಒಂದೆ‌ ಒಂದು ಎಲೆಯಲ್ಲಿ ಇಷ್ಟೆಲ್ಲ ಉಪಯೋಗವಿರುವುದರಿಂದ ವೀಳ್ಯದೆಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚನ ಮಹತ್ವ ನೀಡಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss