Wednesday, August 10, 2022

Latest Posts

ವೆಂಟಿಲೇಟರ್ ಆಧಾರಿತ ಕೊರೋನಾ ರೋಗಿಯ ಪ್ರಾಣ ಉಳಿಸುವುದಂತೆ ಈ ಇಂಜೆಕ್ಷನ್!

ದಿಲ್ಲಿ: ವೆಂಟಲೇಟರ್‌ನಲ್ಲಿರುವ ಕೊರೋನಾ ರೋಗಿಯನ್ನು ಮೃತ್ಯುದವಡೆಯಿಂದ ಪಾರು ಮಾಡುವ ಶಕ್ತಿಯಿದೆ ಈ ಡೆಕ್ಸಾಮೆಥಸೋನ್ ಸ್ಟಿರಾಯ್ಡ್‌ಗೆ. ದುಬಾರಿಯಲ್ಲದ ಈ ಇಂಜೆಕ್ಷನ್ ಕ್ರಯ 10 ಎಂಎಲ್‌ಗೆ ಹತ್ತು ರೂಪಾಯಿ ಅಥವಾ ಇದಕ್ಕಿಂತಲೂ ಕಡಿಮೆ.
ವೆಂಟಿಲೇಟರ್ ಆಧಾರಿತ ರೋಗಿಗಳ ಮರಣ ಪ್ರಮಾಣವನ್ನು ಮೂರನೇ ಒಂದರಷ್ಟು ಮತ್ತು ಆಮ್ಲಜನಕ ಆಧಾರಿತ ರೋಗಿಗಳ ಮರಣ ಪ್ರಮಾಣವನ್ನು ಐದನೇ ಒಂದರಷ್ಟು ಕಡಿಮೆ ಮಾಡುವ ತಾಕತ್ತಿದೆ ಡೆಕ್ಸಾಮೆಥಸೋನ್‌ಗೆ. ಕೋವಿಡ್ -19 ನಿಯಂತ್ರಣ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೂಚನೆಯಂತೆ ಹಲವು ತೆರನಾದ ಔಷಧಗಳ ಕ್ಲಿನಿಕಲ್ ಟೆಸ್ಟ್‌ನಲ್ಲಿ ತೊಡಗಿರುವ ವಿಜ್ಞಾನಿಗಳು ಈ ಖುಷಿ ವಾರ್ತೆಯನ್ನು ನೀಡಿದ್ದಾರೆ.
ವೆಂಟಿಲೇಟರ್ ಅಳವಡಿತ 8 ಕೊರೋನಾ ರೋಗಿಗಳ ಪೈಕಿ ಒಬ್ಬರ ಪ್ರಾಣವನ್ನು ಈ ಔಷ ಉಳಿಸಬಲ್ಲುದು. ಅದೇ ತೆರ ಆಮ್ಲಜನಕ ಆಧಾರಿತ 25 ರೋಗಿಗಳ ಪೈಕಿ ಒಬ್ಬರ ಮರಣವನ್ನು ಈ ಔಷ ಮೂಲಕ ತಡೆಯಬಹುದು. ಕೊರೋನಾ ರೋಗಿಯ ಚೇತರಿಕೆ ಸಾಧ್ಯತೆಗೆ ಬಲ ನೀಡಿದ ಪ್ರಥಮ ಇಂಜೆಕ್ಷನ್ ಇದಾಗಿದೆ. ಹಾಗೆಂದು ಇದು ವೈರಲ್ ವಿರೋ ಸ್ಟಿರಾಯ್ಡ್ ಅಲ್ಲ, ಆದರೆ ಕೋವಿಡ್-19ರಂತಹ ವೈರಸ್‌ಗಳು ಶರೀರಕ್ಕೆ ದಾಳಿ ಮಾಡಿದ ಸಂದರ್ಭ, ಪ್ರತಿರೋಧ ಶಕ್ತಿ ವರ್ಧನೆಗೆ ಸಹಾಯ ಮಾಡುತ್ತದೆಂದು ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss