ವೆನ್ಲಾಕ್‌ನಲ್ಲಿ ಕೋವಿಡ್ ಪ್ರಯೋಗಾಲಯ ಆರಂಭ: ಮೊದಲ ದಿನ 10 ಗಂಟಲ ದ್ರವ ಮಾದರಿ ಪರೀಕ್ಷೆ

0
82

ಮಂಗಳೂರು: ಇಲ್ಲಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಿರುವ ನೂತನ ಕೋವಿಡ್ ಪ್ರಯೋಗಾಲಯ ಮಂಗಳವಾರ ಅಧಿಕೃತವಾಗಿ ಕಾರ್ಯಾರಂಭಗೊಂಡಿದೆ.
ಮೊದಲ ದಿನ ಒಟ್ಟು ೧೦ ಗಂಟಲದ್ರವ ಮಾದರಿಯ ಪರೀಕ್ಷೆ ನಡೆದಿದೆ. ರೋಗಶಾಸ್ತ್ರಜ್ಞ ಡಾ.ಶರತ್ ಈ ಪ್ರಯೋಗಾಲಯದ ಮೇಲ್ವಿಚಾರಕರಾಗಿದ್ದಾರೆ.
ಇನ್ನುಮುಂದೆ ಆಯಾ ದಿನದ ಪರೀಕ್ಷೆಯ ವರದಿಗಳು ಕೆಲವೇ ಗಂಟೆಗಳಲ್ಲಿ ಲಭ್ಯವಾಗಲಿದೆ. ಇದು ವರೆಗೆ ಜಿಲ್ಲೆಯಲ್ಲಿ ಕಂಡುಬಂದ ಕೋವಿಡ್ -19 ಪ್ರಕರಣಗಳ ಪರೀಕ್ಷೆಗಾಗಿ ಹಾಸನಕ್ಕೆ ಕಳುಹಿಸಬೇಕಾಗಿತ್ತು .ಇತ್ತೀಚೆಗೆ ಆರೋಗ್ಯ ಸಚಿವ ಶ್ರೀರಾಮುಲು ಅವರು ನಗರಕ್ಕೆ ಬಂದಾಗ ಮಂಗಳೂರಿನಲ್ಲಿ ಪ್ರಯೋಗಾಲಯ ತೆರೆಯುವ ಭರವಸೆ ನೀಡಿದ್ದರು. ಇಲ್ಲಿ ಪ್ರಯೋಗಾಲಯ ತೆರೆದಿರುವುದರಿಂದ ದ.ಕ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೂ ಇದು ಸಹಕಾರಿಯಾಗಲಿದೆ.

LEAVE A REPLY

Please enter your comment!
Please enter your name here