Saturday, June 25, 2022

Latest Posts

ವೆನ್ ಲಾಕ್ ಜಿಲ್ಲಾಸ್ಪತ್ರೆ ಅಧೀಕ್ಷಕಿ ಡಾ. ರಾಜೇಶ್ವರೀ ದೇವಿ ವರ್ಗಾವಣೆ

ಮಂಗಳೂರು: ಜಿಲ್ಲೆಯ ಬಂಟ್ವಾಳ ತಾಲೂಕಿನ ವೆನ್ ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ವರ್ಗಾವಣೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ನಿರ್ಲಕ್ಷವಹಿಸಿದ್ದ ರಾಜೇಶ್ವರಿ ದೇವಿಯನ್ನು ಇದೀಗ ಸರ್ಕಾರ ವರ್ಗಾವಣೆ ಮಾಡಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಡಾ.ರಾಜೇಶ್ವರಿ ದೇವಿ ವಿರುದ್ಧ ಈ ಆದೇಶ ಹೊರಡಿಸಿದ್ದು, ಸದ್ಯ ವೆನ್ ಲಾಕ್  ಆಸ್ಪತ್ರೆಯ ನೂತನ ಅಧೀಕ್ಷಕರಾಗಿ ಬಂಟ್ವಾಳ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಸದಾಶಿವ ನೇಮಕ ಆಗಿದ್ದಾರೆ.

ರಾಜ್ಯದಲ್ಲಿ  ಕೊರೋನಾ ಸೋಂಕು ಹೆಚ್ಚಾಗುತ್ತಿದ್ದರೂ ಈ ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಕೊರೋನಾ ಸೋಂಕಿತರಿಗೆ ಯಾವುದೇ ವ್ಯವಸ್ಥಿತ ವಾರ್ಡ್ ಗಳು  ಇಲ್ಲದಿರುವುದರ ಕುರಿತು ಹೊಸದಿಗಂತ ಪತ್ರಿಕೆ ವರದಿ ಮಾಡಿತ್ತು. ಬಳಿಕ ಕೊರೋನಾ ವರ್ಡ್ ಗಳ ಅವ್ಯವಸ್ಥೆಯ ಕುರಿತು ಮಾತನಾಡಿದ ಆಡಿಯೋ ಕೂಡ ವೈರಲ್ ಆಗಿತ್ತು.

ಜಿಲ್ಲಾಸ್ಪತ್ರೆಯಲ್ಲಿ ಬೇಕಾದ ಸೌಕರ್ಯಗಳನ್ನು ಒದಗಿಸುವಲ್ಲಿ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ವಿರುದ್ಧ ಹಲವಾರು ನಿರ್ಲಕ್ಷ್ಯದ ಆರೋಪ ಕೇಳಿ ಬಂದಿತ್ತು. ಇದೀಗ ಎಚ್ಚೆತ್ತ ಸರ್ಕಾರ ಡಾ.ರಾಜೇಶ್ವರಿ ದೇವಿಯನ್ನು ವರ್ಗಾವಣೆ ಮಾಡಿ, ಆದೇಶ ಹೊರಡಿಸಿದೆ.

ಡಾ. ರಾಜೇಶ್ವರಿ ದೇವಿ ಕಳೆದ ಏಳು ವರ್ಷಗಳಿಂದ ವೆನ್ ಲಾಕ್ ಆಸ್ಪತ್ರೆಯಲ್ಲಿ ಅಧೀಕ್ಷಕಿಯ ಹುದ್ದೆಯಲ್ಲಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss