Tuesday, August 16, 2022

Latest Posts

ವೆಬ್​ ಸಿರೀಸ್​ ನೋಡಿ ನೆದರ್​​​​ಲ್ಯಾಂಡ್​​​​ನಿಂದ ಉಡುಪಿಗೆ ಎಂಡಿಎಂಎ ಡ್ರಗ್ಸ್: ನಾಲ್ವರು ಅಂದರ್

ಬೆಂಗಳೂರು:‌ ಕೇಂದ್ರ ಮಾದಕವಸ್ತು ನಿಯಂತ್ರಣ ಮಂಡಳಿಯು ವಿಳಾಸವಿಲ್ಲದೆ ವಿದೇಶಿ ಪೋಸ್ಟ್‌ ಮೂಲಕ ಉಡುಪಿಗೆ ಬಂದ್ದಿದ 750 ಗ್ರಾಂ ತೂಕದ ಎಂಡಿಎಂಎ ಜಪ್ತಿ ಮಾಡಿದ್ದು, ನಾಲ್ವರನ್ನು ಎನ್​​​​​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಕೆ.ಪ್ರಮೋದ್, ಡ್ರಗ್ಸ್ ಸೂತ್ರದಾರ ಫಾಹಿಮ್, ಹಶೀರ್ ಮತ್ತು ಎಸ್​​​​​.ಎಸ್.ಶೆಟ್ಟಿ ಬಂಧಿತರಾಗಿದ್ದು, ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ ಆರೋಪಿಗಳು ಉಡುಪಿಯ ಮಣಿಪಾಲ ಯುನಿವರ್ಸಿಟಿ NMAMIT ಕಾಲೇಜು, SRM ಯುನಿವರ್ಸಿಟಿ ಚೆನ್ನೈ ವಿದ್ಯಾರ್ಥಿಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ದಂಧೆಯ ಮಾಸ್ಟರ್ ಮೈಂಡ್ ಕೇರಳ ಮೂಲದ ಫಾಹಿಮ್ ಹಾಗೂ ಪ್ರಮೋದ್, ಆತನ ಸಹಚರರಾಗಿದ್ದ ಕರ್ನಾಟಕದ ಅಬು ಹಾಶಿರ್ ಹಾಗೂ ಸಾಹಿತ್ ಶೆಟ್ಟಿ ಜೊತೆ ಸೇರಿ ವೆಬ್ ಸಿರೀಸ್ ನೋಡಿ ಮಾದಕವಸ್ತು ಎಂಡಿಎಂಎ ಆರ್ಡರ್ ಮಾಡುವ ಕಲೆ ಕರಗತ ಮಾಡಿಕೊಂಡಿದ್ದರು.
ಕ್ರಿಪ್ಟೊ ಕರೆನ್ಸಿ (bitcoin) ಮೂಲಕ ಡಾರ್ಕ್ ವೆಬ್​​​​​​​​​ನಲ್ಲಿ ಮಾದಕ ವಸ್ತು ಆರ್ಡರ್ ಮಾಡಿ, ನಕಲಿ ವಿಳಾಸ ನೀಡುತ್ತಿದ್ದರು. ಡ್ರಗ್ಸ್ ಕೈಸೇರುತ್ತಿದ್ದಂತೆ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಎನ್​​ಸಿಬಿ ಬೆಂಗಳೂರು ವಲಯ ಮುಖ್ಯಸ್ಥ ಅಮಿತ್ ಘವಾಟೆ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss