Monday, August 15, 2022

Latest Posts

ವೆಬ್ ಸೀರಿಸ್ ನಲ್ಲಿ ನಟಿಸಲು ಕಪಿಲ್ ಶರ್ಮಾ ಸಂಭಾವನೆ ಎಷ್ಟು ಗೊತ್ತಾ? ಕೇಳಿದರೆ ಬೆಚ್ಚಿಬೀಳೋದು ಗ್ಯಾರಂಟಿ!

ಮುಂಬೈ : ಹಿಂದಿ ಕಿರುತೆರೆಯಲ್ಲಿ ಮೂಡಿ ಬರುವ ಪ್ರಸಿದ್ಧ  ಕಾಮಿಡಿ ಕಾರ್ಯಕ್ರಮ ಕಪಿಲ್ ಶರ್ಮಾ ಶೋ.  ಈ ಕಪಿಲ್ ಶರ್ಮಾ ಶೋ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿರುವ ಕಪಿಲ್ ಈಗ ಮತ್ತೆ ಸುದ್ದಿಯಲಿದ್ದಾರೆ. ಕಿರುತೆರೆ ಮತ್ತು ಸಿನಿಮಾದಲ್ಲಿ ಮಿಂಚಿರುವ ಕಪಿಲ್, ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಕಪಿಲ್ ಶರ್ಮಾ ಮೊದಲ ವೆಬ್ ಸೀರಿಸ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಮೊದಲ ಡಿಜಿಟಲ್ ಯೋಜನೆಗೆ ಕಪಿಲ್ ಶರ್ಮಾ ಬೇಡಿಕೆ ಇಟ್ಟಿರುವ ಸಂಭಾವನೆ ಅನೇಕರ ಹುಬ್ಬೇರಿಸುವಂತೆ ಮಾಡಿದೆ.

ಇತ್ತೀಚಿಗೆ ಕಪಿಲ್ ಶರ್ಮಾ ಶೋನಲ್ಲಿ ನಟ ಮತ್ತು ಕಾಮಿಡಿಯನ್ ಕೃಷ್ಣ ಅಭಿಷೇಕ್ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಕಪಿಲ್ ಶರ್ಮಾ ಒಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ವೆಬ್ ಸೀರಿಸ್ ಗೆ 20 ಕೋಟಿ ಚಾರ್ಜ್ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಲಾಕ್ ಡೌನ್ ಬಳಿಕ ಮತ್ತೆ ಶೋ ಪ್ರಾರಂಭ ಮಾಡಿರುವ ಕಪಿಲ್, ಇಂಥ ಕಷ್ಟದ ಸಮಯದಲ್ಲೂ ಪ್ರೇಕ್ಷಕರನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಶೋ ಜೊತೆಗೆ ವೆಬ್ ಸೀರಿಸ್ ನಲ್ಲೂ ಕಾಣಿಸಿಕೊಳ್ಳುತ್ತಾರಾ ಎಂದು ಕಾದುನೋಡಬೇಕು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss