Saturday, July 2, 2022

Latest Posts

ವೇಟ್ ಲಿಫ್ಟಿಂಗ್ ನಲ್ಲಿ ಸ್ವರ್ಣ ಪದಕ ಮುಡಿಗೇರಿಸಿಕೊಂಡ ಮೀರಾಬಾಯಿ ಚಾನು

ಕೊಲ್ಕತ: ಕೊಲ್ಕತ್ತದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಸ್ವರ್ಣ ಪದಕ ಪಡೆದುಕೊಳ್ಳುವುದರೊಂದಿಗೆ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ.

ಮೀರಾಬಾಯಿ ಚಾನು 49 ಕೆ.ಜಿ.ವಿಭಾಗದಲ್ಲಿ 203 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

2020ನೇ ಸಾಲಿನಲ್ಲಿ ಸ್ನ್ಯಾಷ್ ವಿಭಾಗದಲ್ಲಿ 88 ಕೆ.ಜಿ ತೂಕ ಮತ್ತು ಕ್ಲೀನ್ ಹಾಗೂ ಜೆರ್ಕ್ ನಲ್ಲಿ 115 ಕೆ.ಜಿ ತೂಕ ಎತ್ತಿದರು. ಒಟ್ಟಾರೆ 203 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 2014ರ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದರು.

ಮಂಗಳವಾರ ಇವರ ಚಿನ್ನದ ಪದಕ ಸಾಧನೆಯೊಂದಿಗೆ ಮೀರಾಬಾಯಿ ಅವರು ವಿಶ್ವ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದರು. ಮೊದಲನೇ ಸ್ಥಾನದಲ್ಲಿ ಚೀನಾದ ಜಿಯಾಂಗ್ ಹುಯಿಹವಾ(212), ನಂತರದ ಶ್ರೇಯಾಂಕದಲ್ಲಿ ಹೌ ಝಿಹುಯಿ (211ಕೆ.ಜಿ) ಹಾಗೂ ಕೊರಿಯಾದ ರೀ ಸಾಂಗ್ ಗುಮ್ (209ಕೆ.ಜಿ) ಇದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss