ಹೊಸದಿಗಂತ ವರದಿ, ಮಂಗಳೂರು:
ಇಲ್ಲಿನ ಅತ್ತಾವರದಲ್ಲಿರುವ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ವೇಶ್ಯಾವಾಟಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮಾಲಿಕ ಚಂದ್ರಶೇಖರ್, ರೂಂ ಬಾಯ್ ಹರೀಶ್ ಪೂಜಾರಿ ಇವರನ್ನು ವಶಕ್ಕೆ ಪಡೆಯಲಾಗಿದೆ.
ಈ ಆರೋಪಿಗಳು ಸೇರಿದಂತೆ ಇನ್ನೋರ್ವ ಆರೋಪಿ ಸಂದೀಪ್ ಸೇರಿಕೊಂಡು ನಿರಂತರವಾಗಿ ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.