ಹೊಸದಿಗಂತ ಆನ್ ಲೈನ್ ಡೆಸ್ಕ್:
ವೈಕುಂಠ ಏಕಾದಶಿ ಹಿನ್ನಲೆ ಇದೇ ಮೊದಲ ಭಾರಿಗೆ ತಿರುಪತಿಯಲ್ಲಿ 10 ದಿನಗಳ ವೈಕುಂಠ ದ್ವಾರ ತೆರೆಯಲು ಟಿಟಿಡಿ(ತಿರುಪತಿ ತಿರುಮಲ ದೇವಸ್ತಾನಂ) ಮಂಡಳಿ ತಿಳಿಸಿದೆ.
ಇಷ್ಟು ವರ್ಷಗಳ ಕಾಲ ಏಕಾದಶಿ ಮತ್ತು ದ್ವಾದಶಿ ದಿನಗಳಂದು ಮಾತ್ರ ವೈಕುಂಠ ದ್ವಾರ ತೆರೆಯಲಾಗಿತ್ತು. ಡಿ.25ರಿಂದ 10 ದಿನಗಳ ಕಾಲ ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನ ಸಿಗಲಿದೆ.
ಈ ಬಗ್ಗೆ ಮಂಡಳಿ ಸಾಕಷ್ಟು ಚರ್ಚೆ ನಡೆಸಿ 10 ದಿನಗಳ ಕಾಲ ವೈಕುಂಠ ದ್ವಾರ ತೆರೆಯಲು ತೀರ್ಮಾನಿಸಲಾಗಿದೆ. ದೇಶದ ಇತರೆ ದೇವಾಲಯಗಳಲ್ಲಿ 10 ದಿನಗಳವರೆಗೆ ವೈಕುಂಠ ದ್ವಾರ ತೆರೆಯುವುದರಿಂದ ತಿರುಪತಿಯಲ್ಲೂ ಈ ವರ್ಷ ಈ ನಿಯಮ ಪಾಲಿಸಲಾಗುವುದು ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.