Wednesday, July 6, 2022

Latest Posts

ವೈದ್ಯನಲ್ಲೂ ಸೋಂಕು ದೃಢ: ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕಲಬುರಗಿ: ನಗರದಲ್ಲಿ ಮತ್ತೊಂದು ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಮೃತ ವೃದ್ಧನಿಗೆ ಮನೆಗೆ ತೆರಳಿ ಚಿಕಿತ್ಸೆ ನೀಡಿದ್ದ ವೈದ್ಯನಿಗೆ ಕೊರೋನಾ ಪಾಸಿಟಿವ್ ಇದೆ ಎಂದು ಜಿಲ್ಲಾಧಿಕಾರಿ ಬಿ. ಶರತ್ ತಿಳಿಸಿದ್ದಾರೆ.

ಕೊರೋನಾ ಸೋಂಕಿನಿಂದ ಮೃತಪಟ್ಟ ವೃದ್ಧನೊಂದಿಗೆ 63 ವರ್ಷದ ವೈದ್ಯ ನೇರ ಸಂಪರ್ಕ ಹೊಂದಿದ ಹಿನ್ನೆಲೆ ಹೋಮ್ ಐಸೋಲೇಷನ್‌ನಲ್ಲಿ ಇಡಲಾಗಿತ್ತು. ಇದೀಗ ಕೊರೋನಾ ಸೊಂಕು ಇರುವುದು ದೃಢಪಟ್ಟಿದ್ದು, ವೈದ್ಯನನ್ನು ಇಎಸ್‌ ಐ ಆಸ್ಪತ್ರೆಯ ಐಸೋಲೇಟೆಡ್ ಪ್ರತ್ಯೇಕ ವಾರ್ಡ್‌ಗೆ ರವಾನಿಸಲಾಗಿದೆ. ಕೊರೋನಾ ಸೋಂಕಿನಿಂದ ಮೃತಪಟ್ಟ ವೃದ್ಧ ಸಿದ್ದಕಿಗೆ ಈ ವೈದ್ಯ ಮನೆಯಲ್ಲೇ ಚಿಕಿತ್ಸೆ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss