ಮೈಸೂರು: ಬೇರು ಫೌಂಡೇಷನ್ವತಿಯಿಂದ ವಿಶ್ವ ವೈದ್ಯರ ದಿನಾಚರಣೆಯನ್ನು ಒಂಟಿಕೊಪ್ಪಲ್ ವೃತ್ತದಲ್ಲಿರುವ ಡಿ ಆರ್ ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಆಚರಿಸಲಾಯಿತು.
ವೈದ್ಯರಾದ ಡಾ ಕಿರಣ್ ಕುಮಾರ್,ಡಾ ದೀಪಕ್, ಡಾ.ರಾಮಕೃಷ್ಣ,ಡಾ.ಕಿರಣ್ ಮೈ ಮಿಶ್ರಾ, ಡಾ.ದೀಪಾಲಿ, ಡಾ ಸಂತೋಷ್ ಜಿ ರಾವ್ರನ್ನು ಆತ್ಮೀಯವಾಗಿ ಸನ್ಮಾನಿಸಿ, ವೈದ್ಯರ ಸೇವೆಯನ್ನು ಸ್ಮರಿಸಲಾಯಿತು.
ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಬಿಜೆಪಿ ನಗರ ಮಾಜಿ ಅಧ್ಯಕ್ಷ ಡಾ ಮಂಜುನಾಥ್, ಮನುಷ್ಯ ತನ್ನ ಜೀವನದಲ್ಲಿ ಏನಾದರು ಸಂಪಾದಸಬೇಕು ಎಂದರೇ, ಅದು ಉತ್ತಮ ಆರೋಗ್ಯ ಮಾತ್ರ. ಹಾಗಾಗಿಯೇ ಆರೋಗ್ಯವೇ ಭಾಗ್ಯ ಎಂದು ಋಷಿಮುನಿಗಳು ಹೇಳಿದ್ದರು ಎಂದರು.
ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ಚರಕ, ಶುಶ್ರುತರು ಭಾರತೀಯ ವೈದ್ಯ ಪರಂಪರೆಯ ಹೆಮ್ಮೆಯಾಗಿದ್ದಾರೆ.
ಭಾರತೀಯ ಪರಂಪರೆಯಲ್ಲಿ ದೇವಲೋಕದ ಧನ್ವಂತರಿಯನ್ನು ಆರೋಗ್ಯದ ದೇವತೆ ಎಂದು ಪೂಜಿಸಲಾಗುತ್ತಿದೆ. ಚರಕ, ಶುಶ್ರುತರು ಪಾರಂಪರಿಕ ವೈದ್ಯರಾಗಿದ್ದುದು ಹೆಮ್ಮೆಯ ವಿಚಾರ. ತುಂಬೆ, ಬೇವಿನ ಸೊಪ್ಪಿನಿಂದಲೂ ರೋಗ ನಿವಾರಿಸುವ ಕಲೆ ಭಾರತೀಯ ಋಷಿಮುನಿಗಳಿಗೆ ಕರಗತವಾಗಿತ್ತು. ವೈದ್ಯಕೀಯ ಪದ್ದತಿಯಲ್ಲಿ ಸಾಕಷ್ಟು ಸಂಶೋಧನೆಗಳಾಗಿವೆ. ಆಗುತ್ತಲೂ ಇವೆ. ಗ್ರಾಮೀಣ ಭಾಗದ ಸರ್ಕಾರಿ ಮತ್ತು ಖಾಸಗಿ ವೈದ್ಯರ ಸೇವೆ ಅನನ್ಯವಾದುದು ಎಂದರು.

ರೋಗ ವಾಸಿ ಮಾಡುವಲ್ಲಿ ಹತ್ತಾರು ಆತಂಕಗಳನ್ನು ಎದುರಿಸುತ್ತಿರುವ ವೈದ್ಯರ ಬಗ್ಗೆ ಸಮಾಜ ಮೃದು ಭಾವ ತಾಳುವುದನ್ನು ರೂಢಿಸಿಕೊಳ್ಳಬೇಕು. ವೈದ್ಯರು ಪ್ರಾಣ ತೆಗೆಯುವವರಲ್ಲ. ರೋಗಿಗಳ ಜೀವ ಉಳಿಸುವುದು ಅವರ ಪರಮ ಕರ್ತವ್ಯವಾಗಿರುತ್ತದೆ. ರೋಗಿಗಳ ಕಡೆಯವರು ತಾಳ್ಮೆ ವಹಿಸಬೇಕು. ಖಾಯಿಲೆ ವಾಸಿ ಮಾಡುವಲ್ಲಿ ಶ್ರಮಿಸುವ ವೈದ್ಯರ ಸೇವೆಯನ್ನು ನೆನೆಯೋಣ’ ಎಂದರು.