ಬೆಂಗಳೂರು: ಸರ್ಕಾರಿ ವೈದ್ಯರ ಪರಿಷ್ಕೃತ ವೇತನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರ ಸಮ್ಮತಿಸಿದ್ದರೂ, ಇನ್ನೂ ಕೆಲವು ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಯಾವುದೇ ಯಾವುದೇ ನಿರ್ಧಾರ ಅಂತಿಮವಾಗಿಲ್ಲ.
ವೈದ್ಯರ ಎಲ್ಲಾ ಬೇಡಿಕೆಯನ್ನು ಇಡೇರಿಸುವ ಬಗ್ಗೆ ಅಂತಿಮ ನಿರ್ಧಾರವಾಗಿರದ ಕಾರಣ ವೈದ್ಯ ತಂಡ ಸೆ.೧೮ರವರೆಗೂ ಮುಷ್ಕರವನ್ನು ಮುಂದುವರೆಸುವುದಾಗಿ ಹೇಳಿದ್ದು, ಸೆ. ೧೮ ರಂದು ವೈದ್ಯಾಧಿಕಾರಿ ತಂಡ ಸಚಿವರೊಂದಿಗೆ ಮಾತುಕತೆ ನಡೆಸಿ ನಂತರ ಮುಷ್ಕರವನ್ನು ಮುಂದುವರೆಸ ಬೇಕೇ? ಬೇಡವೇ? ಎಂಬ ನಿರ್ಧಾರ ತೆಗೆದುಕೊಳ್ಳುವುದಾಗಿ ಸುದ್ದಿ ಮೂಲಗಳು ತಿಳಿಸಿವೆ.