Sunday, June 26, 2022

Latest Posts

ವೈರಸ್ ಮುಕ್ತ ಸ್ವಾತಂತ್ರ್ಯ ಪಡೆಯಬೇಕಾಗಿದೆ: ಬಿ. ವಿ.ಮಂಜುನಾಥ್

ಮೈಸೂರು:ಮೈಸೂರಿನ ಅಗ್ರಹಾರ ವಾರ್ಡ್ ನಂ. 51 ರ ಶ್ರೀರಾಮ ರಸ್ತೆಯಲ್ಲಿ 74 ನೇ ಸ್ವಾತಂತ್ರ್ಯೋತ್ಸವವನ್ನು ಮಧ್ಯರಾತ್ರಿ 12 ಗಂಟೆಗೆ ಆಚರಿಸಲಾಯಿತು, ನಗರ ಪಾಲಿಕೆ ಸದಸ್ಯ ಬಿ ವಿ ಮಂಜುನಾಥ್ ಧ್ವಜಾರೋಹಣ ನೆರವೇರಿಸಿ ಪುಷ್ಪಾರ್ಚನೆ ಮಾಡಿ ಎಲ್ಲರಿಗೂ ಸಿಹಿ ವಿತರಿಸಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷ ಕಳೆದಿದೆ, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಡೆ ಭಾರತವನ್ನು ವಿಶ್ವಗುರುವನ್ನಾಗಿಸುವ ಕಡೆಗೆ ಇದೆ ಎಂದರು, ಅಲ್ಲದೇ ಈ ಸಂದರ್ಭದಲ್ಲಿ ಇಡೀ ಪ್ರಪಂಚವನ್ನೇ ಕಾಡುತ್ತಿರುವ ಕೋರೋನಾ ವೈರಸ್ ವಿರುದ್ದ ಪ್ರತಿಯೊಬ್ಬರೂ ಹೋರಾಡಿ, ವೈರಸ್ ಮುಕ್ತ ಸ್ವಾತಂತ್ರ್ಯ ಪಡೆಯಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ಗುರುರಾಜ್ ಶೆಣೈ, ಸುಭಾಷ್, ರಂಗನಾಥ್, ಆದರ್ಶ್ ರಾಜ್, ಸುಮನ್, ಧನುಷ್ ಅರಸ್, ಸುಮುಖ್, ಋತ್ವಿಕ್‌, ಶಿವಪ್ರೇರಣ, ಸ್ಕಂದ, ನವೀನ್, ಅಜಯ್‌, ವಿಶ್ವಾಸ್, ಯಶವಂತ್, ಮನು ಮುಂತಾದವರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss