Tuesday, August 16, 2022

Latest Posts

ವೈ ಕೆಟಗರಿ ಭದ್ರತೆ ಬೇಕೆಂದು ಮನವಿ ಮಾಡಿದ ನಟಿ ಪಾಯಲ್‌ ಘೋಷ್

ಮುಂಬೈ: ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಗುರುತರ ಆರೋಪ ಮಾಡಿದ್ದ ನಟಿ ಪಾಯಲ್‌ ಘೋಷ್‌ ಇಂದು ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾಗಿ ತಮಗೆ ವೈ ಕೆಟಗರಿ ಭದ್ರತೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಸೋಮವಾರ ಕೇಂದ್ರ ಸಚಿವ ರಾಮ್‌ದಾಸ್‌ ಅತ್ವಾಳೆ ಅವರೊಂದಿಗೆ ಜಂಟಿ ಪ್ರತಿಕಾಗೋಷ್ಠಿ ನಡೆಸಿದ್ದ ಅವರು, ‘ಅನುರಾಗ್ ವಿರುದ್ಧ ದೂರು ನೀಡಿರುವ ನನಗೆ ಜೀವ ಬೆದರಿಕೆ ಇದೆ. ಹಾಗಾಗಿ, ನನಗೆ ವೈ ಕೆಟಗರಿ ಭದ್ರತೆ ಒದಗಿಸಬೇಕು’ ಎಂದು ಕೇಳಿಕೊಂಡಿದ್ದರು. ಜೊತೆಗೆ ಮಂಗಳವಾರ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯರಿ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಅಂತೆಯೇ ಇಂದು ಅವರನ್ನು ಭೇಟಿ ಮಾಡಿ, ಅವರಿಗೂ ಮನವಿ ಪತ್ರ ನೀಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ, ತಮಗೆ ವೈ ಪ್ಲಸ್‌ ಕೆಟಗರಿ ಭದ್ರತೆ ಬೇಕೆಂದು ನಟಿ ಕಂಗನಾ ರಣಾವತ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವರ ಮನವಿ ಪುರಸ್ಕರಿಸಿದ್ದ ಸರ್ಕಾರವು ಅವರಿಗೆ ವೈ ಪ್ಲಸ್‌ ಭದ್ರತೆಯನ್ನು ನೀಡಿತ್ತು. ಈಗ ಪಾಯಲ್‌ ಕೂಡ ಅದೇ ಮನವಿ ಮಾಡಿದ್ದಾರೆ.

 

‘ಅನುರಾಗ್ ಕಶ್ಯಪ್ ನನ್ನ ಮೇಲೆ ಅತ್ಯಂತ ಅಮಾನವೀಯವಾಗಿ ವರ್ತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೇ, ಈತನ ಮೇಲೆ ಕ್ರಮ ಕೈಗೊಳ್ಳಿ. ಒಬ್ಬ ಸೃಜನಶೀಲ ವ್ಯಕ್ತಿಯ ಹಿಂದಿರುವ ರಾಕ್ಷಸ ಮುಖವನ್ನು ದೇಶ ನೋಡಲಿ. ನನಗೆ ಗೊತ್ತಿದೆ, ಇದರಿಂದ ನನಗೆ ತೊಂದರೆ ಆಗಲಿದೆ. ನಾನೀಗ ತೊಂದರೆಯಲ್ಲಿದ್ದೇನೆ. ದಯವಿಟ್ಟು ಸಹಾಯ ಮಾಡಿ’ ಎಂದು ಆರೋಪಿಸಿದ್ದರು. ಆದರೆ, ಪಾಯಲ್‌ ಮಾಡಿದ ಆರೋಪವನ್ನು ನಿರ್ದೇಶಕ ಅನುರಾಗ್ ಕಶ್ಯಪ್ ತಳ್ಳಿ ಹಾಕಿದ್ದರು. ಇದೆಲ್ಲ ಆಧಾರರಹಿತ ಆರೋಪ ಎಂದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!