Wednesday, August 17, 2022

Latest Posts

‘ವೋಕಲ್​ ಫಾರ್​ ಲೋಕಲ್​’ ಮಂತ್ರಜಪಿಸಿದ ನಮೋ: ದೀಪಾವಳಿ ವೇಳೆ ಸ್ಥಳೀಯ ಉತ್ಪನ್ನಗಳ ಖರೀದಿಗೆ ಪ್ರಧಾನಿ ಮನವಿ

ಹೊಸ ದಿಂಗತ ಆನ್ ಲೈನ್ ಡೆಸ್ಕ್:

ದೇಶದೆಲ್ಲೆಡೆ ದೀಪಾವಳಿ ಸಂಭ್ರಮದ ಸಕಲ ಸಿದ್ದತೆಗಳು ಜೋರಾಗಿ ನಡೆಯುತ್ತಿದ್ದು, ಇದರ ಮಧ್ಯೆ ಕೆಲವೊಂದು ರಾಜ್ಯಗಳಲ್ಲಿ ಪಟಾಕಿ ಮಾರಾಟ ಸಂಪೂರ್ಣ ಬ್ಯಾನ್​ ಮಾಡಿ ಆದೇಶ ಹೊರಡಿಸಲಾಗಿದ್ದು, ಇದೀಗ ಪ್ರಧಾನಿ ಮೋದಿ ದೇಶದ ಜನರ ಮುಂದೆ ಮತ್ತೊಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಹೌದು, ‘ವೋಕಲ್​ ಫಾರ್​ ಲೋಕಲ್​’ ‘ಲೋಕಲ್​ ಫಾರ್ ದೀಪಾವಳಿ’ ಮಂತ್ರ ಜಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಉತ್ಪನ್ನ ಖರೀದಿ ಮಾಡುವಂತೆ ಮನವಿ ಮಾಡಿದ್ದಾರೆ.
ಸಧ್ಯ ಭಾರತ ಆತ್ಮನಿರ್ಭರತೆಯೆಡೆಗೆ ಸಾಗುತ್ತಿದ್ದು, ಸ್ಥಳೀಯ ಉತ್ಪನ್ನಗಳಿಗೆ ಖರೀದಿ, ಬಳಕೆಗೆ ಆದ್ಯತೆ ನೀಡಲು ಪ್ರಧಾನಿ ನರೇಂದ್ರ ಮೋದಿ ಪದೇಪದೆ ಕರೆ ನೀಡುತ್ತಿದ್ದಾರೆ. ಇದೀಗ ಈ ದೀಪಾವಳಿಯ ಸಮಯಲ್ಲಿ ಸ್ಥಳೀಯ ಉತ್ಪನ್ನ ಖರೀದಿ ಮಾಡುವುದರಿಂದ ಆರ್ಥಿಕತೆಗೆ ಹೊಸ ಚೈತನ್ಯ ಸಿಗಲಿದೆ ಎಂದಿರುವ ಮೋದಿ , ಈ ಸಮಯದಲ್ಲಿ ದೇಶಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಾರಾಣಸಿಯ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಮೋದಿಯವರು, ದೇಶದ ಜನರಿಗೆ ದೀಪಾವಳಿ ಶುಭಾಶಯ ತಿಳಿಸಿದರು. ನಂತರ ‘ಪ್ರತಿಯೊಬ್ಬರೂ ಹೆಮ್ಮೆಯಿಂದ ಸ್ಥಳೀಯ ಉತ್ಪನ್ನಗಳನ್ನ ಖರೀದಿಸಬೇಕು. ಅದರ ಬಗ್ಗೆ ಹೆಚ್ಚೆಚ್ಚು ಪ್ರಚಾರ ಕೊಡಬೇಕು. ಉಳಿದವರೂ ಸ್ಥಳೀಯ ವಸ್ತುಗಳನ್ನು ಖರೀದಿಸುವಂತೆ ಪ್ರೇರೇಪಿಸಬೇಕು. ಆಗ ಈ ವಸ್ತುಗಳೂ ಬಹುಬೇಗನೇ ಪ್ರಸಿದ್ಧಿ ಪಡೆಯುತ್ತವೆ’ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!