Monday, July 4, 2022

Latest Posts

ವ್ಯಾಪಾರಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು: 1.80 ಲಕ್ಷ ರೂ. ಹಣ ದೋಚಿ ಪರಾರಿ

ಹೊಸದಿಗಂತ ವರದಿ, ಮೈಸೂರು:

ಇಬ್ಬರು ವ್ಯಕ್ತಿಗಳು ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ, 1.80ಲಕ್ಷ ರೂ. ನಗದು ಹಾಗೂ ಚೆಕ್ ಬುಕ್ ಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮೈಸೂರಿನ ಬಂಡೀಪಾಳ್ಯದಲ್ಲಿ ನಡೆದಿದೆ.

ಬಂಡೀಪಾಳ್ಯದ ದಿನಸಿ ವ್ಯಾಪಾರಿಯಾದ ಪ್ರೇಮ್ ಕುಮಾರ್ ಅವರು ವ್ಯಾಪಾರ ಮುಗಿಸಿಕೊಂಡು ಮನೆಗೆ ಬೈಕ್‌ನಲ್ಲಿ ಬರುತ್ತಿದ್ದಾಗ ದಳವಾಯಿ ಕಾಲೇಜು ಬಳಿಯ ಅವರನ್ನು ಹಿಂಬಾಲಿಸಿಕೊoಡು ಬಂದ ಇಬ್ಬರು ಕ್ಷುಲ್ಲಕ ಕಾರಣ ಹೇಳಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.

ಬಳಿಕ ಸ್ಕೂಟರ್ ಡಿಕ್ಕಿಯಲ್ಲಿದ್ದ 1.80ಲಕ್ಷ ರೂ.ನಗದು ಮತ್ತು 3 ಚೆಕ್ ಬುಕ್ ಇದ್ದ ಬ್ಯಾಗ್ ನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರೇಮ್ ಕುಮಾರ್ ನೀಡಿದ ದೂರಿನ ಮೇರೆಗೆ ಕೆ.ಆರ್.ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss