ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪ್ರೇಮಿಗಳ ದಿನಕ್ಕೆ ಇನ್ನೇನು ಒಂದೇ ವಾರ ಬಾಕಿ ಉಳಿದಿದೆ. “ವ್ಯಾಲೆಂಟೈನ್ಸ್ ಡೇ” ಹೇಗೆ ಆಚರಣೆ ಮಾಡಬೇಕು ಅಂಥ ಪ್ಲಾನ್ ಕೂಡ ಮಾಡಿರುತ್ತೀರಾ!! ಆದರೆ ಲವರ್ ಇಲ್ದೆ ಇರುವವರ ಪಾಡು ನೋಡಿ.. ಆ ದಿನವೂ ಮಾಮೂಲಿ ದಿನದಂತೆ ಕಳೆಯುತ್ತಾರೆ.
ಆದರೆ ಬಾಯ್ಫ್ರೆಂಡ್ ಇಲ್ಲದಿರುವವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಏನು ಗೊತ್ತಾ? ಇಲ್ಲೊಬ್ಬ ವ್ಯಕ್ತಿ ನೀವು ಬಾಡಿಗೆ ಕೊಟ್ಟರೆ ನಾನು ಬಾಯ್ಫ್ರೆಂಡ್ ಆಗೋಕೆ ರೆಡಿ ಇದ್ದೀನಿ ಎಂದು ಬೋರ್ಡ್ ಹಿಡಿದುಕೊಂಡು ತಿರುಗುತ್ತಾ ಇದ್ದಾನೆ.
ಈತ ಕಳೆದ 3-4 ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದಾನಂತೆ. ಈ ವ್ಯಕ್ತಿ ಹೆಸರು ಶಕುಲ್. ಈತ ಬಾಡಿಗೆ ಬಾಯ್ ಫ್ರೆಂಡ್ ಕೆಲಸ ಪ್ರಾರಂಭ ಮಾಡುವುದಕ್ಕೂ ಒಂದು ಕಾರಣವಿದೆ. ಪ್ರೀತಿಯಲ್ಲಿ ಹಲವು ಸಲ ವಿಫಲನಾಗಿ ಬೇಸತ್ತು ಇಂತಹ ಕೆಲಸ ಆರಂಭಿಸಿದ್ದಾನಂತೆ.
ಶಕುಲ್ ತುಂಬಾ ಹುಡುಗಿಯರಿಗೆ ಪ್ರಪೋಸ್ ಮಾಡಿದ್ದಾನೆ. ಆದರೆ ಯಾವ ಹುಡುಗಿಯರೂ ಅವನ ಪ್ರೀತಿ ಒಪ್ಪಿಕೊಳ್ಳಲಿಲ್ಲ. ನಿನ್ನ ಪ್ರೀತಿ ಬೇಡ ಸ್ನೇಹ ಸಾಕು ಅಂದಿದ್ದಾರೆ. ಪ್ರತಿ ವರ್ಷವೂ ಪ್ರೇಮಿಗಳ ದಿನ ಬಂದಾಗ ತಾನೆಷ್ಟು ನತದೃಷ್ಟ ಅನಿಸುತ್ತಿತ್ತಂತೆ ಶಕುಲ್’ಗೆ…
ನಂತರ ಶಕುಲ್’ಗೆ ಕೆಲ ಹುಡುಗಿಯರಿಗೂ ಇಂತಹ ಅನುಭವ ಆಗಿರಬಹುದು. ಅವರನ್ನೂ ಅನೇಕರು ನಿರಾಕರಿಸಿದ್ದಿರಬಹುದು ಎಂದು ಅನಿಸಿತಂತೆ. ಅದಕ್ಕಾಗಿಯೇ ಈ ಬಾಡಿಗೆ ಬಾಯ್ ಫ್ರೆಂಡ್ ಉದ್ಯಮ ಶುರು ಮಾಡಿದ್ದಾನೆ.
ಈಗ ಅನೇಕ ಮಹಿಳೆಯರು, ಯುವತಿಯರು ಬಾಡಿಗೆಗೆ ಬೇಕೆಂದು ಶಕುಲ್’ಗೆ ಮೆಸೇಜ್ ಮಾಡುತ್ತಾರಂತೆ. ಮೂರು ವರ್ಷಗಳಲ್ಲಿ 45ಕ್ಕೂ ಹೆಚ್ಚು ಜನರೊಂದಿಗೆ ಡೇಟಿಂಗ್ ಮಾಡಿದ್ದಾನಂತೆ.