ಹೊಸದಿಗಂತ ಆನ್ಲೈನ್ ಡೆಸ್ಕ್:
ಕಣ್ಣೆದುರಿದ್ದರೆ ಪಾನೀಪೂರಿ… ಡಯಟ್ ಕೋ ಮಾರೋ ಗೋಲಿ!
ಇದು ನೀಲಿ ತಾರೆ ಸನ್ನಿ ಲಿಯೋನ್ ಮಂತ್ರ. ದೇಹಾರೋಗ್ಯದ ಬಗ್ಗೆ, ಆಹಾರದ ಬಗ್ಗೆ ಹೆಚ್ಚು ಗಮನ ಕೊಡುವ ಈಕೆಗೆ ದುರಿಗೆ ಪಾನೀಪುರಿ ಘಮಘಮಿಸುತ್ತಿದ್ದರೆ ಡಯೆಟ್ ಎಲ್ಲಾ ಮರೆತುಹೋಗುತ್ತದೆಯಂತೆ.
ತಮ್ಮ ವ್ಯಾನಿಟಿ ವ್ಯಾನ್ನಲ್ಲಿ ಪಾನೀಪುರಿ ಸವಿಯುವ ದೃಶ್ಯವನ್ನು ಆಕೆ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದು ಭಾರಿ ಸದ್ದು ಮಾಡುತ್ತಿದೆ. ‘ತುಮ್ನೆ ೧೨ ಪಾನೀಪುರಿ ಖಾಯೆ’ ಎಂದು ಸನ್ನಿ ಅವರ ಕೇಶ ವಿನ್ಯಾಸಕಿ ಎಚ್ಚರಿಕೆಯ ಮಾತು ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು. ಅದಕ್ಕೆ ಉತ್ತರವಾಗಿ ಸನ್ನಿ, ’ಜೀತಿ ನೀನು ಸುಳ್ಳುಹೇಳುತ್ತಿದ್ದಿ. ಹೀಗೆಲ್ಲಾ ಸುಳ್ಳು ಹೇಳುವುದು ಒಳ್ಳೆಯದಲ್ಲ, ನಾನಿನ್ನೂ ಎರಡೇ ತಿಂದಿರುವುದು, ಇದು ಮೂರನೆಯದ್ದು’ ಎಂದು ಇನ್ನೊಂದು ಪಾನೀಪುರಿಯನ್ನು ಬಾಯಿಗೆ ಇಳಿಸಿಕೊಳ್ಳುತ್ತಾರೆ.
ಅಲ್ಲದೆ ಈ ವಿಡಿಯೋವನ್ನು ‘ವ್ಯಾನಿಟಿವ್ಯಾನ್ನಲ್ಲಿ ಇದ್ದುದು ಮೂರೇ ಪಾನೀಪುರಿ’ ಎಂಬ ಶೀರ್ಷಿಕೆ ನೀಡಿ ಅವರು ಶೇರ್ ಮಾಡಿಕೊಂಡಿದ್ದಾರೆ.