Tuesday, September 22, 2020
Tuesday, September 22, 2020

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಶಂಕರಗಢದ ಪೊಲೀಸ್ ಠಾಣೆಯಲ್ಲಿಯೇ ನಡೆದಿತ್ತು ರಾಮೋತ್ಸವ! ಮೂರು ದಶಕಗಳ ಹಿಂದಿನ ನೆನಪು ಬಿಚ್ಚಿಟ್ಟ ಪಲಿಮಾರು ಶ್ರೀ

sharing is caring...!

ಉಡುಪಿ: ಇಂದು ನಮಗೆಲ್ಲ ಹೆಮ್ಮೆಯ, ಸ್ವಾಭಿಮಾನದ, ಪರಮಪಾವನವಾದ ದಿನ. ಈ ದಿನಕ್ಕಾಗಿ ನಾವೆಲ್ಲ ವರ್ಷಗಳಿಂದ ಕಾಯುತ್ತಿದ್ದೇವೆ ಎಂದು ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕಳೆದ ಹಲವು ದಶಕಗಳಿಂದ ಪೇಜಾವರ ಶ್ರೀಗಳೊಂದಿಗೆ ಅಯೋಧ್ಯೆ ಹೋರಾಟದಲ್ಲಿ ಪಾಲ್ಗೊಂಡಿದ್ದ ಪಲಿಮಾರು ಶ್ರೀಗಳು ತಮ್ಮ ರಾಮ ಮಂದಿರ ಹೋರಾಟದ ನೆನಪುಗಳನ್ನು ‘ಹೊಸದಿಗಂತ’ದೊಂದಿಗೆ ಬಿಚ್ಚಿಟ್ಟಿದ್ದಾರೆ.
ಅಯೋಧ್ಯೆ ರಾಮ ಮಂದಿರಕ್ಕಾಗಿ ಬೇರೆ ಬೇರೆ ಕಡೆಗಳಲ್ಲಿ ಇಟ್ಟಿಗೆ ಪೂಜೆ, ರಾಮ ತಾರಕ ಮಂತ್ರ ಯಜ್ಞಗಳು ನಡೆದಿತ್ತು. ಅವುಗಳಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ.
ಅಯೋಧ್ಯೆಯಲ್ಲಿ ಒಮ್ಮೆ ಕರಸೇವೆ ನಡೆಸುವ ಘೋಷಣೆಯಾದಾಗ ಗುರುಗಳು, ಪೇಜಾವರ ಶ್ರೀಗಳು, ಅದಮಾರು ಶ್ರೀಗಳ ಜೊತೆಗೆ ನಾವೆಲ್ಲ ಅಲ್ಲಿಗೆ ಹೋಗಿದ್ದೆವು. ಅಲ್ಲಿ ಉತ್ತರ ಪ್ರದೇಶಕ್ಕೆ ಪ್ರವೇಶ ಆಗುವಾಗಲೇ ನಮ್ಮ ವಾಹನಗಳನ್ನು ಅಡ್ಡಗಟ್ಟಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಆ ಘಟನೆಯನ್ನು ಇನ್ನೂ ಮರೆಯಲು ಸಾಧ್ಯವಾಗುತ್ತಿಲ್ಲ. ನಾವೆಲ್ಲ ಯತಿಗಳು ಅಲ್ಲಿದ್ದೆವು. ಪೊಲೀಸರು ನಿಮ್ಮನ್ನು ಬಿಡಲು ಆಗುವುದಿಲ್ಲ ಎಂದಿದ್ದರು. ಅಲ್ಲಿದ್ದವರಲ್ಲಿ ಯಾರೋ ಒಬ್ಬರು ನಾವು ಪ್ರಯಾಗಕ್ಕೆ ಹೋಗುತ್ತಿದ್ದೇವೆ ಎಂದು ಸುಳ್ಳು ಹೇಳಿದ್ದರು. ಆಗ ಪೇಜಾವರ ಶ್ರೀಗಳು ವಿರೋಧ ಮಾಡಿ, ‘ಇಲ್ಲ ನಾವು ಅಯೋಧ್ಯೆಗೇ ಹೋಗುವುದು, ಕರಸೇವೆಗೇ ಹೋಗುತ್ತಿದ್ದೇವೆ’ ಎಂದು ಹೇಳಿದರು. ಪೊಲೀಸರಿಗೆ ಸಾಕ್ಷಿ ಸಿಕ್ಕಿತು, ಹಾಗಾಗಿ ನಮ್ಮನ್ನು ಅಲ್ಲಿಯೇ ಕೂರಿಸಿದರು.
ಪೊಲೀಸ್ ಠಾಣೆಯ ಪಕ್ಕದಲ್ಲಿ ಬಾವಿ ಇತ್ತು, ಅಲ್ಲಿ ಸ್ನಾನ ಮಾಡಿ ಮಧ್ಯಾಹ್ನ 12 ಗಂಟೆಗೆ ದೇವರ ಪೂಜೆ ನಡೆಸಲಾಯಿತು. ದೇವರ ಪೂಜೆ ನೋಡಲು, ಘಂಟೆ ಬಾರಿಸಲು ಇದ್ದದ್ದು ಪೊಲೀಸರೇ. ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್, ಅಯೋಧ್ಯೆಗೆ ಯಾರು ಜನರು ಬರಬಾರದು, ಎಲ್ಲರನ್ನು ತಡೆಯಬೇಕು ಎಂದು ಸೂಚನೆ ಕೊಟ್ಟಿದ್ದರು. ಆದರೆ ಪೊಲೀಸ್ ಠಾಣೆಯಲ್ಲಿಯೇ ರಾಮ ದೇವರು, ಪಟ್ಟದ ದೇವರಿಗೆ ರಾಮೋತ್ಸವ ನಡೆಯಿತು.
ನಮಗೆ ಶಾಲೆಯಲ್ಲಿ ಬಂಧಿಸಲಾಗಿತ್ತು!
ಠಾಣೆಯಲ್ಲಿ ಸ್ವಾಮೀಜಿಗಳು ಸೇರಿದ್ದಾರೆ ಎನ್ನುವ ಸಂದೇಶ ಸಿಗುತ್ತಲೇ ನಮ್ಮ ಸ್ಥಳವನ್ನು ಬದಲಿಸಲಾಯಿತು. ಪೊಲೀಸ್ ಠಾಣೆಯಿಂದ ಒಂದು ಶಾಲೆಗೆ ಕರೆದುಕೊಂಡು ಹೋದರು. ಶಂಕರಗಢದ ಶಾಲೆಯೇ ನಮಗೆ ಜೈಲಾಗಿತ್ತು. ಶಾಲೆಯನ್ನು ಜೈಲಾಗಿ ನಾವು ನೋಡುವುದಿಲ್ಲ, ಅದನ್ನು ಖುಷಿಯಿಂದ ಸಂಭ್ರಮಿಸುವವರು ನಾವು. ಅದು ಕಾರ್ತಿಕ ಮಾಸ, ಸಂಜೆ ತುಳಸೀಪೂಜೆ, ಸಂಕೀರ್ತನೆಗಳನ್ನು ನೋಡುವುದಕ್ಕೆ ಸಾವಿರ ಸಾವಿರ ಮಂದಿ ಬರುತ್ತಿದ್ದರು. ಇದು ರೋಚಕ ಅನುಭವ. ಅಲ್ಲಿಂದ ಅಯೋಧ್ಯೆಗೆ ನಮಗೆ ಹೋಗಲು ಸಾಧ್ಯವಾಗಿಲ್ಲ. ಅಲ್ಲಿಂದಲೇ ವಾಪಸ್ ಬರಬೇಕಾಯಿತು. ಆದರೆ ಖುಷಿ ಇತ್ತು, ಕರಸೇವೆಯಲ್ಲಿ ಭಾಗವಹಿಸದೇ ಇದ್ದರೂ ರಾಮ ದೇವರಿಗಾಗಿ ನಾವು ಕೆಲವು ದಿನ ಹೀಗೆ ಎಲ್ಲವನ್ನು ಬಿಟ್ಟು ಗೃಹ ಬಂಧನಕ್ಕೆ ಒಳಗಾಗಿದ್ದೆವು.
ರಾಮ ಲಲ್ಲಾನ ಪೂಜೆ ಮಾಡುವ ಅವಕಾಶ
ಉತ್ತರ ಪ್ರದೇಶದಲ್ಲಿ ಕಲ್ಯಾಣಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಇನ್ನೊಮ್ಮೆ ಕರಸೇವೆ ಘೋಷಣೆಯಾಗಿತ್ತು. ಆಗಲೂ ಗುರುಗಳು, ಪೇಜಾವರ ಶ್ರೀಗಳ ನೇತೃತ್ವದೊಂದಿಗೆ ಭಾಗವಹಿಸಿದ್ದೆವು. ಅಲ್ಲೆಲ್ಲ ಇಟ್ಟಿಗೆ ಇಡುವ ಅವಕಾಶವಿತ್ತು. ಪೇಜಾವರ ಶ್ರೀಗಳ ನೇತೃತ್ವದಲ್ಲಿ ಅದರಲ್ಲೆಲ್ಲ ಭಾಗವಹಿಸಿದೆವು. ಮರುದಿನ ಪೇಜಾವರ ಶ್ರೀಗಳು ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠೆ ಮಾಡಿದರು. ಆಗಲೂ ಸಾಕ್ಷಿಯಾಗಿದ್ದೆವು, ಪೂಜೆ ಮಾಡುವ ಯೋಗವನ್ನು ಮರೆಯಲಾಗುವುದಿಲ್ಲ. ದೇವರು ಎಲ್ಲರ ಪ್ರಾರ್ಥನೆಗೆ ಅನುಗ್ರಹಿಸಿದ್ದಾನೆ.
ಅಯೋಧ್ಯೆ ಎಂದರೆ ಯುದ್ಧವಿಲ್ಲದ್ದು ಎಂದರ್ಥ. ನಾವು ಇದನ್ನು ಅಸಂಭವ ಎಂದು ತಿಳಿದುಕೊಂಡಿದ್ದೆವು. ಅಸಾಧ್ಯದಾದದ್ದು ಸಾಧ್ಯವಾಗುತ್ತದೆ ಎಂದಾಗ ಮೈ ರೋಮಾಂಚನವಾಗುತ್ತದೆ. ಸರ್ವೋಚ್ಚ ನ್ಯಾಯಾಲಯ ಐಕ್ಯಮತದಿಂದ ಉತ್ತಮ ತೀರ್ಪು ನೀಡಿದೆ. ಇದೀಗ ರಾಮಮಂದಿ ನಿರ್ಮಾಣದ ಸುಯೋಗ ಸನ್ನಿಹಿತವಾಗಿದೆ. ಅಲ್ಲಿ ಒಬ್ಬ ವ್ಯಕ್ತಿ ನಿಂತು ಭೂಮಿ ಪೂಜನ ನಡೆಸುತ್ತಿಲ್ಲ. ಅಲ್ಲಿ ರಾಮ ದೇವರು, ಆಂಜನೇಯ ದೇವರೇ ಕೂತು ಶಿಲಾನ್ಯಾಸ ಮಾಡುತ್ತಿದ್ದಾರೆ ಎಂದು ನಾವು ಅನುಸಂಧಾನ ಮಾಡಬೇಕು, ಪ್ರಧಾನಿಗಳ ಕೈಗೆ ನಾವೆಲ್ಲರೂ ಕೈ ಜೋಡಿಸಬೇಕು. ನಾವೆಲ್ಲರೂ ಅಲ್ಲಿ ಹೋಗಲು ಸಾಧ್ಯವಿಲ್ಲ ಎಂದು ಚಿಂತೆ ಬೇಡ, ಇಲ್ಲೇ ಕೂತು ನಾವು ಸಂಕಲ್ಪ ಮಾಡಿದರೆ, ಅಲ್ಲಿ ಹೋಗಿ ಅದು ಕಾರ್ಯಕಾರಿಯಾಗುತ್ತದೆ. ಸುಂದರವಾದ ಮಂದಿರ ನಿರ್ಮಾಣವಾಗುತ್ತದೆ ಎಂದು ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕಾಸರಗೋಡು ಜಿಲ್ಲೆಯಲ್ಲಿ ಅನ್ ಲಾಕ್-4 ಜಾರಿಗೆ: ಸಹಜ ಸ್ಥಿತಿಯತ್ತ ಜನಜೀವನ

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆಯ ಆತಂಕ ನೆಲೆಗೊಂಡಿರುವಂತೆಯೇ ಇನ್ನಷ್ಟು ಸಡಿಲಿಕೆ ಜಾರಿಗೆ ಬರುವುದರೊಂದಿಗೆ ಜನಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ. ದೇಶದಲ್ಲಿ ಅನ್ ಲಾಕ್-4 ಸಡಿಲಿಕೆ ಸೋಮವಾರದಿಂದ ಜಾರಿಗೆ ಬಂದಿದೆ. ಅದರಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 100...

Don't Miss

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...
error: Content is protected !!