Thursday, June 30, 2022

Latest Posts

ಶಂಕರಾಚಾರ್ಯ ಜಯಂತಿ ಅಚರಣೆಯ ಹಣ ಕೋರೋನಾ ಪರಿಹಾರ ನಿಧಿಗೆ ದೇಣಿಗೆ

ಬಳ್ಳಾರಿ: ಪ್ರತಿ ವರ್ಷ ಶ್ರೀ ಶಂಕರಾಚಾರ್ಯ ಜಯಂತಿಯನ್ನು ನಗರದ ಹೊರವಲಯದ ಶೃಂಗೇರಿ ಶ್ರೀ ಶಾರದ ಶಂಕರ ಮಠದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದ್ರೇ ಈ ಬಾರಿ ಕೊರೋನಾ ಭೀತಿ ಇರುವ ಹಿನ್ನೆಲೆ ಶಂಕರಾಚಾರ್ಯ ಜಯಂತಿಗಾಗಿ ಮೀಸಲಿಟ್ಟಿದ್ದ 35 ಸಾವಿರ ರೂ.ಹಣವನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವುದರ ಮೂಲಕ ಶ್ರೀಮಠದ ಸದಸ್ಯರು ಇತರರಿಗೆ ಮಾದರಿಯಾಗಿದ್ದಾರೆ.

ಶಂಕರಾಚಾರ್ಯ ಜಯಂತಿ ಆಚರಣೆಯ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಶ್ರೀಮಠದ ಸದಸ್ಯರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಚೆಕ್ ಸ್ವೀಕರಿಸಿದ ಡಿಸಿ ನಕುಲ್ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀಮಠದ ಸದಸ್ಯರಾದ ಬಿ.ಕೆ.ಬಿ.ಎನ್. ಮೂರ್ತಿ, ಲೋಕನಾಥ, ಮೋಹನ್, ಬಿ.ಮುರಳಿ, ರಘುನಂದನ್, ವಕೀಲರಾದ ರಂಗನಾಥ, ರಾಮಮೋಹನ ದೇಸಾಯಿ, ಶ್ರೀದರ, ಪಾರ್ಥಸಾರಥಿ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss