Wednesday, August 10, 2022

Latest Posts

ಶಂಕಿತ ಉಗ್ರ ರೆಹಮಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಐಸಿಸ್ ಸೇರಿದಂತೆ ಇನ್ನಿತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಆರೋಪದಡಿ ಬಂಧಿತನಾಗಿದ್ದ ಶಂಕಿತನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದೆಹಲಿ ತಂಡ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಬೆಂಗಳೂರಿನ ಬಸವನಗುಡಿಯಲ್ಲಿ ವಾಸವಿದ್ದ ವೈದ್ಯ ಶಂಕಿತ ಉಗ್ರ ಅಬ್ದುಲ್ ರೆಹಮಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ‌. ಕಳೆದ ವರ್ಷ ಆಗಸ್ಟ್​ 17ರಂದು ಅಬ್ದುಲ್ ರೆಹಮಾನ್ ಅನ್ನು ಬಂಧಿಸಲಾಗಿತ್ತು. ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ (ಐಎಸ್‌ಕೆಪಿ) ಜತೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೆಹಲಿ ವಿಶೇಷ ನ್ಯಾಯಾಲಯಕ್ಕೆ ಎನ್‌ಐಎ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ್ದಾರೆ.
ಬಾಂಗ್ಲಾ‌ ಮೂಲದ ನಿಷೇಧಿತ ಇಸ್ಲಾಮಿಕ್‌ ಸ್ಟೇಟ್ ಕೊರೋಸನ್ ಪ್ರಾವಿನ್ಸ್ (ISKP) ಎಂಬ ಸಂಘಟನೆಗೆ ಅಬ್ದುಲ್‌ ರೆಹಮಾನ್‌ ಸದಸ್ಯನಾಗಿದ್ದ. ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗ್ತಿದೆ. 2013ರಲ್ಲಿ ಸಿರಿಯಾದ ಐಸಿಸ್ ಉಗ್ರ ಕ್ಯಾಂಪ್​​​ಗಳಿಗೆ ಭೇಟಿ ಕೊಟ್ಟಿದ್ದರೆನ್ನಲಾದ ಅಬ್ದುಲ್​ ರೆಹಮಾನ್ ಆ ಬಳಿಕ ಐಸಿಸ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದ. ಐಸಿಸ್​​​​ಗೆ ಮೆಡಿಕಲ್ ಅಪ್ಲಿಕೇಷನ್ ಸಿದ್ಧಪಡಿಸಿಕೊಳ್ಳಲು ಮುಂದಾಗಿದ್ದ ಎಂದು ಹೇಳಲಾಗ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss