Sunday, August 14, 2022

Latest Posts

ಶತಮಾನದ ಅಂಚಿನಲ್ಲಿದ್ದ ಶಾಲಾ ಕಟ್ಟಡ ಕುಸಿತ: ಧಾರವಾಡದಲ್ಲಿ ತಪ್ಪಿದ ದೊಡ್ಡ ಅನಾಹುತ

ಧಾರವಾಡ: ಶತಮಾನದ ಅಂಚಿನಲ್ಲಿದ್ದ ಇಲ್ಲಿನ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದ ಘಟನೆ ಧಾರವಾಡದ ಗೌಂಧಿಚೌಕ್ ಬಳಿಯ ಪಂಚಗೇರಿ ಓಣಿಯಲ್ಲಿ ಗುರುವಾರ ನಡೆದಿದೆ.
ಕೊರೋನಾ ಸೋಂಕಿನ ಹಿನ್ನಲೆ ಶಾಲೆಗೆ ರಜೆ ಇರುವ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಂದರ್ಥದಲ್ಲಿ ಜನರ ಜೀವ ತೆಗೆಯವ ಕೊರೋನಾವೇ ಜೀವನ ಹಾನಿ ತಡೆದಂತಾಗಿದೆ.
ಅತ್ಯoತ ಹಳೆಯ ಕಾಲದ ಮಣ್ಣಿನ ಇಟ್ಟಿಗೆಯಿಂದ ಕೂಡಿದ ಶಾಲಾ ಗೋಡೆಗಳು ಈಚೇಗೆ ಸುರಿದ ಮಳೆಯಿಂದ ಶಿಥಿಲಾವಸ್ಥೆ ಕಂಡಿವೆ. ತೊಲೆಗಳು(ಕಟ್ಟಿಗೆ) ಹುಳುಕು ಹತ್ತಿದ್ದರಿಂದ ಮೇಲ್ಛಾವಣಿ ಕುಸಿದಿದೆ.
90 (1929) ವರ್ಷದ ಹಳೆಯದಾದ ಶಾಲಾ ಕಟ್ಟಡ ಈಚೇಗೆ ಸುರಿದ ನಿರಂತರ ಮಳೆಯಿಂದ ಶಿಥಿಲಾವಸ್ಥೆ ಕಂಡಿತ್ತು. ಆದರೆ, ದುರಿಸ್ಥಿಗೆ ಶಿಕ್ಷಣ ಇಲಾಖೆ ನಿರ್ಲಕ್ಸ್ಯ ವಹಿಸಿತ್ತೆಂಬ ಆರೋಪವಿದೆ.
ಶಾಲಾ ಮೇಲ್ಛಾವಣೆ ಹಾಗೂ ಗೋಡೆ ಕುಸಿತದ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಕಟ್ಟಡ ನೆಲಸಮಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss