spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶನಿವಾರವೂ ಭಕ್ತರ ವ್ರವೇಶಕ್ಕೆ ತೆರೆದಿರಲಿದೆ ಪುರಿ ಜಗನ್ನಾಥ ದೇವಾಲಯ

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಒಡಿಶಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆ ಕೋವಿಡ್ ನಿರ್ಬಂಧವನ್ನು ಸರ್ಕಾರ ಸಡಿಲಿಕೆ ಮಾಡಿದ್ದು, ಈ ಹಿನ್ನೆಲೆ  ಪುರಿ ಜಗನ್ನಾಥ ದೇವಾಲಯದಲ್ಲಿ ಇಂದಿನಿಂದ ಪ್ರತಿ ಶನಿವಾರವೂ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಆದರೆ,  ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರು ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ನೀಡಬೇಕು ಅಥವಾ ಕೋವಿಡ್  ನೆಗೆಟಿವ್ ಪ್ರಮಾಣಪತ್ರವನ್ನು ನೀಡುವುದು ಕಡ್ಡಾಯ.

ದೇವಸ್ಥಾನಕ್ಕೆ ಬರುವವರು 96 ಗಂಟೆಗಳ ಒಳಗೆ ಕೋವಿಡ್ ಪರೀಕ್ಷೆ ಮಾಡಿಸಿರಬೇಕು, ಮತ್ತು ಫೋಟೋ ಸೇರಿದಂತೆ ವೈಯಕ್ತಿಕ ಗುರುತು ಪತ್ರಗಳನ್ನು ತರಬೇಕು.

ಭಕ್ತಾದಿಗಳು ಸಿಂಗದ್ವಾರದ ಮೂಲಕ ಮಾತ್ರ ಪ್ರವೇಶಿಸಿ,. ಉತ್ತರ ದ್ವಾರದ ಮೂಲಕ ನಿರ್ಗಮಿಸಬೇಕು.

ಕಳೆದ 4 ತಿಂಗಳ ಬಳಿಕ ಆಗಸ್ಟ್ 23ರಂದು ದೇವಾಲಯವನ್ನು ತೆರೆಯಲಾಗಿತ್ತು. ಇಷ್ಟು ದಿನ ದಿನಗಳ ಕಾಲ ವಾರದಲ್ಲಿ 5 ದಿನ ಮಾತ್ರ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಇಂದಿನಿಂದ ಶನಿವಾರವೂ ಅವಕಾಶ ನೀಡಲಾಗಿದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss