Thursday, January 28, 2021

Latest Posts

ಶಬರಿಮಲೆಗೆ ಆಗಮಿಸುವ ಸ್ವಾಮೀ ಭಕ್ತರಿಗೆ ಈ ಬಾರಿ ಉಚಿತ ಆಹಾರ ವ್ಯವಸ್ಥೆ

ಹೊಸದಿಗಂತ ಆನ್ ಲೈನ್ ಡೆಸ್ಕ್: 

ಕೊರೋನಾ ಭೀತಿಯ ನಡುವೆಯೂ ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದ್ದು, ಕೋವಿಡ್ -೧೯ ರ ಮಾರ್ಗಸೂಚಿ ಅನುಸರಿಸಿ ಭಕ್ತರು ಆಗಮಿಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸನ್ನಿಧಾನ, ಪಂಪಾ ಮತ್ತು ನಿಲಕಲ್‌ನಲ್ಲಿ ಭಕ್ತರಿಗಾಗಿ ಉಚಿತ ಆಹಾರದ ವ್ಯವಸ್ಥೆ ಮಾಡಿದೆ. ಸನ್ನಿಧಾನದಲ್ಲಿ ಬೆಳಗ್ಗೆ 5.30ರಿಂದ ರಾತ್ರಿ 9ರ ತನಕ ಆಹಾರ ವಿತರಣೆ ಮಾಡಲಾಗುತ್ತಿದೆ.
ಸನ್ನಿಧಾನದಲ್ಲಿ ಅನ್ನದಾನ ಮಂಟಪದಲ್ಲಿ ಆಹಾರ ತಯಾರಿಕೆಯಲ್ಲಿ 40 ಸಿಬ್ಬಂದಿಗಳು ತೊಡಗಿದ್ದು, ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಆಹಾರ ತಯಾರಿಸುತ್ತಿದ್ದಾರೆ.
ಪಂಪಾದಲ್ಲಿ ಬೆಳಗ್ಗೆ ಸಂಜೆ 7 ರಿಂದ 10ರ ತನಕ ಆಹಾರ ವಿತರಣೆ ನಡೆಯಲಿದ್ದು, 20 ಸಿಬ್ಬಂದಿಗಳು ಆಹಾರ ತಯಾರು ಮಾಡುತ್ತಿದ್ದಾರೆ. ನಿಲಕಲ್‌ನಲ್ಲಿ 15 ಸಿಬ್ಬಂದಿಗಳು ಆಹಾರವನ್ನು ತಯಾರಿಸಿ ಭಕ್ತರಿಗೆ ವಿತರಣೆ ಮಾಡುತ್ತಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ 6 ವಿವಿಧ ಸ್ಥಳಗಳಲ್ಲಿ 6 ಭಾಷೆಗಳಲ್ಲಿ ಭಕ್ತರಿಗೆ ಸೂಚನೆ ನೀಡಲು ಫಲಕಗಳನ್ನು ಆಳವಡಿಸಿದೆ. ಕೋವಿಡ್ ಮಾರ್ಗಸೂಚಿಗಳನ್ನು ಹೇಗೆ ಪಾಲನೆ ಮಾಡಬೇಕು? ಎಂದು ಮಾಹಿತಿ ನೀಡಲಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!